ಜೋಹಾನ್ಸ್ ಬರ್ಗ್: ಪ್ರವಾಸಿ ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾಗೆ ಆಘಾತ ಎದುರಾಗಿದೆ. ಗಾಯದ ಕಾರಣದಿಂದ ಹರಿಣಗಳ ವೇಗದ ಬೌಲರ್ ಆನ್ರಿಚ್ ನೋರ್ಜೆ ಸರಣಿಯಿಂದ ಹೊರಬಿದ್ದಿದ್ದಾರೆ.
ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದೆ. ಗಾಯದಿಂದ ಆನ್ರಿಚ್ ನೋರ್ಜೆ ಇನ್ನೂ ಚೇತರಿಸಿಕೊಳ್ಳದ ಕಾರಣದಿಂದ ಅವರು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ, ಅವರ ಬದಲಿಗೆ ಯಾವುದೇ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಬೆದರಿಕೆಯೊಡ್ಡಿ ಅಪ್ರಾಪ್ರ ಬಾಲಕಿಯ ಅತ್ಯಾಚಾರ: ಪಾಕ್ ಕ್ರಿಕೆಟರ್ ವಿರುದ್ಧ ದೂರು ದಾಖಲು
ಡಿಸೆಂಬರ್ 26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಜ.19ರಿಂದ ಏಕದಿನ ಸರಣಿ ನಡೆಯಲಿದೆ. ಕೋವಿಡ್ ಕಾರಣದಿಂದ ಟೆಸ್ಟ್ ಪಂದ್ಯಗಳಲ್ಲಿ ಮೈದಾನಕ್ಕೆ ಪ್ರೇಕ್ಷಕರಿಗೆ ಬರಲು ಅನುಮತಿ ನಿರಾಕರಿಸಲಾಗಿದೆ.
ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕಗಿಸೊ ರಬಾಡ, ಸರೆಲ್ ಎರ್ವೀ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಐಡೆನ್ ಮಾರ್ಕ್ರಾಮ್, ವಿಯಾನ್ ಮಲ್ಡರ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟೌರ್ಮನ್, ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್, ಡುವಾನ್ನೆ ಒಲಿವಿಯರ್