Advertisement

Hijab: ಇರಾನ್‌ ಹಿಜಾಬ್‌ ನೀತಿಗೆ ಮತ್ತೊಂದು ಬಲಿ

07:10 PM Oct 28, 2023 | Team Udayavani |

ಟೆಹ್ರಾನ್‌: ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಮೆಟ್ರೋ ರೈಲಿನಲ್ಲಿ ಕಳೆದ ವಾರ ಹಿಜಾಬ್‌ ಧರಿಸದ ಕಾರಣ ಯುವತಿಯನ್ನು ಥಳಿಸಿ, ಗಾಯಗೊಳಿಸಲಾಗಿತ್ತು. ಶನಿವಾರ ಆಕೆ ಅಸುನೀಗಿದ್ದಾಳೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ಅರ್ಮಿತಾ ಗೆರಾವಂಡ್‌ ಮೃತ ದುರ್ದೈವಿ.

Advertisement

ಹಿಜಾಬ್‌ ಧರಿಸದ ಕಾರಣ ನೈತಿಕ ಪೊಲೀಸ್‌ಗಿರಿಗೆ ಒಳಗಾಗಿ ಪೊಲೀಸ್‌ ವಶದಲ್ಲಿ ಮಹ್ಸಾ ಅಮಿನಿ ಮೃತಪಟ್ಟು ಒಂದು ವರ್ಷ ಘಟಿಸುವ ವೇಳೆಗೆ ಹಿಜಾಬ್‌ ಸಂಬಂಧ ಮತ್ತೂಂದು ಬಲಿಯಾದಂತಾಗಿದೆ. ಮಹ್ಸಾ ಸಾವು ಖಂಡಿಸಿ ಇರಾನ್‌ನಾದ್ಯಂತ ದಿನಗಟ್ಟಲೇ ನಾಗರಿಕರು ಬೀದಿಗಿಳಿದು ಉಗ್ರ ಹೋರಾಟ ನಡೆಸಿದ್ದರು. ಅ.1ರಂದು ಅರ್ಮಿತಾ ಮೆಟ್ರೋ ರೈಲಿನ ಒಳಗೆ ಪ್ರವೇಶಿಸಿದರು. ಹಿಜಾಬ್‌ ಧರಿಸದ ಕಾರಣ ಆಕೆಯನ್ನು ಹಿಗಾಮುಗ್ಗಾ ಥಳಿಸಲಾಗಿತ್ತು. ಪ್ರಜ್ಞೆ ಕಳೆದುಕೊಂಡ ಆಕೆ ಸ್ಥಳೀಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next