Advertisement

Bihar ನಿರ್ಮಾಣ ಹಂತದ ಮತ್ತೊಂದು ಸೇತುವೆ ಕುಸಿತ

05:40 PM Jun 24, 2023 | Team Udayavani |

ಪಾಟ್ನಾ: ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಗಂಗಾನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಬಿದ್ದ ಕೇವಲ ಮೂರು ವಾರಗಳ ನಂತರ, ಕಿಶನ್‌ಗಂಜ್ ಜಿಲ್ಲೆಯಲ್ಲಿ ಮತ್ತೊಂದು ಸೇತುವೆಯ ಒಂದು ಭಾಗವು ಶನಿವಾರ ಕುಸಿದಿದೆ.

Advertisement

ಬಿಹಾರದ ರಾಜಧಾನಿ ಪಾಟ್ನಾದಿಂದ 400 ಕಿ.ಮೀ ದೂರದಲ್ಲಿ ನಡೆದ ಘಟನೆಯಲ್ಲಿ ಮೆಚಿ ನದಿಯ ಮೇಲಿನ ಸೇತುವೆಯ ಪಿಲ್ಲರ್ ಕುಸಿದಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಅರವಿಂದ್ ಕುಮಾರ್ ಹೇಳಿದ್ದಾರೆ. ನಿರ್ಮಾಣ ಹಂತದಲ್ಲಿರುವ ಸೇತುವೆಯು ಪೂರ್ಣಗೊಂಡ ನಂತರ ಕಿಶನ್‌ಗಂಜ್ ಮತ್ತು ಕತಿಹಾರ್ ಅನ್ನು ಸಂಪರ್ಕಿಸುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.

ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಹೇಳಿರುವ ಅಧಿಕಾರಿ, ಕಾರಣವನ್ನು ತನಿಖೆ ಮಾಡಲು ತಜ್ಞರ ಐದು ಸದಸ್ಯರ ತಂಡ ರಚಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next