Advertisement

ಸಮುದ್ರ ಕಣ್ಗಾವಲಿಗೆ ಇನ್ನೆರಡು ರಾಡಾರ್‌

12:50 AM Feb 01, 2019 | Team Udayavani |

ಪಣಂಬೂರು: ಪಶ್ಚಿಮ ಸಮುದ್ರ ತೀರದ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕುಂದಾಪುರ ಮತ್ತು ಬೇಲೆಕೇರಿಯಲ್ಲಿ ಎರಡು ರಾಡಾರ್‌ಗಳನ್ನು  ಅಳವಡಿಸಲಾಗುವುದು ಎಂದು ಕರಾವಳಿ ರಕ್ಷಣಾ ಪಡೆಯ ಡಿಐಜಿ ಹಾಗೂ ಕಮಾಂಡರ್‌ ಎಸ್‌.ಎಸ್‌. ದಸೀಲಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಬೇಲೆಕೇರಿಯಲ್ಲಿ ರಾಡಾರ್‌ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾ ಧೀನ  ಪ್ರಕ್ರಿಯೆ ಅಂತಿಮಗೊಂಡಿದೆ. ಕುಂದಾಪುರದ ಲೈಟ್‌ಹೌಸ್‌ನಲ್ಲಿ ರಾಡಾರ್‌ ಕೇಂದ್ರ ನಿರ್ಮಾಣ ಆಗಲಿದೆ. ಭಟ್ಕಳ ಹಾಗೂ ಸುರತ್ಕಲ್‌ಗ‌ಳಲ್ಲಿ ಈಗಾಗಲೇ ರಾಡಾರ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳು 60ರಿಂದ 80 ನಾಟಿಕಲ್‌ ಮೈಲು ವರೆಗಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಬಲ್ಲವು. ಸುರತ್ಕಲ್‌ನ ರಾಡಾರ್‌ ಕೇಂದ್ರದಲ್ಲಿ ಕುಳಿತು ಭಟ್ಕಳದವರೆಗೆ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಿದೆ. ರಾಡಾರ್‌ಗಳು ಗುಣಮಟ್ಟದ ಕೆಮರಾ ಗಳನ್ನು ಹೊಂದಿವೆ ಎಂದರು.

ಕರಾವಳಿ ರಕ್ಷಣಾ ಪಡೆಯ ನೌಕೆಗಳು ಮತ್ತು ವಿಮಾನಗಳು ಕರ್ನಾಟಕದ ಕಡಲ ತೀರವನ್ನು ಸುರಕ್ಷಿತವಾಗಿಸಿವೆ. ಸಮುದ್ರದಲ್ಲಿ ಅಕ್ರಮ ಚಟು ವಟಿಕೆಗಳ ಮೇಲೆ ನಿಗಾ ಇರಿಸುವ ಜತೆಗೆ ಸಂಕಷ್ಟ, ಅಪಾಯದಲ್ಲಿರುವ ಮೀನುಗಾರರಿಗೆ ತತ್‌ಕ್ಷಣದ ಮಾನವೀಯ ನೆರವನ್ನು ಕೂಡ ಕಾವಲು ಪಡೆಯ ನೌಕೆಗಳ ಮೂಲಕ ನೀಡಲಾಗುತ್ತಿದೆ ಎಂದರು.

ಸಾಮಾಜಿಕ ಜವಾಬ್ದಾರಿ
ತನ್ನ ಕರ್ತವ್ಯದ ಜತೆಗೆ ಸಾಮಾಜಿಕ ಜವಾಬ್ದಾರಿಯ ಕೆಲಸಗಳನ್ನೂ ಕರಾವಳಿ ರಕ್ಷಣಾ ಪಡೆ ನಡೆಸುತ್ತಿದೆ. ವಿಶೇಷ ಸ್ವತ್ಛತಾ ಅಭಿಯಾನ, ಸಮುದಾಯ ಸಂವಾದ ಕಾರ್ಯಕ್ರಮ, ವೈದ್ಯಕೀಯ ಶಿಬಿರದ ಮೂಲ ಜನಜಾಗೃತಿ ಕಾರ್ಯವನ್ನೂ ಮಾಡಿದೆ ಎಂದರು.

ಈ ಸಂದರ್ಭ ಸಾರ್ವಜನಿಕ ಸಂಪರ್ಕ ಅ ಕಾರಿ ಎಲ್‌.ಎಂ. ಗಜ್‌ಬಿಯೆ, ಸಿಬ್ಬಂದಿ ದೀಪಿಕಾ  ಮನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಹಲವು ಜೀವ ರಕ್ಷಣೆ
ಕರಾವಳಿ ರಕ್ಷಣಾ ಪಡೆಯು ಓಖೀ ಚಂಡಮಾರುತ ಸೇರಿದಂತೆ 2017ರಲ್ಲಿ 202 ಪ್ರಾಣ ರಕ್ಷಣೆ ಮಾಡಿದ್ದರೆ, 2018ರಲ್ಲಿ 209 ಹಾಗೂ 2019ರಲ್ಲಿ ಈವರೆಗೆ 19 ಮಂದಿಯ ಪ್ರಾಣ ರಕ್ಷಿಸಿದೆ. 2018ರಲ್ಲಿ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತಲ್ಲದೆ 39 ಮಂದಿಯ ಪ್ರಾಣ ರಕ್ಷಿಸಿದೆ ಎಂದು ಎಸ್‌.ಎಸ್‌. ದಸೀಲಾ ತಿಳಿಸಿದ್ದಾರೆ.

ಕರಾವಳಿ ತೀರ ಸುರಕ್ಷಿತ
ಕರ್ನಾಟಕದ ಕರಾವಳಿ ತೀರ ಸುರಕ್ಷಿತವಾಗಿದೆ. ಆದರೂ ಸಮುದ್ರದ ರಕ್ಷಣೆ ಹಾಗೂ ಮೀನುಗಾರರ ಸುರಕ್ಷೆಗೆ ಕರಾವಳಿ ರಕ್ಷಣಾ ಪಡೆ ಕಟ್ಟೆಚ್ಚರ ವಹಿಸಿದೆ.ಕರ್ನಾಟಕ ಕರಾವಳಿ ಕಾವಲು ಪಡೆ ಫೆ. 1ರಂದು 43ನೇ ಸಂಸ್ಥಾಪನ ದಿನ ಆಚರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next