ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷದ ಬಂದೂಕುಧಾರಿ 22 ಜನರನ್ನು ಕೊಂದ ಒಂದು ದಿನದ ನಂತರ ಟೆಕ್ಸಾಸ್ ನ ರಿಚರ್ಡ್‌ಸನ್‌ನಲ್ಲಿರುವ ಶಾಲೆಗೆ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ರೈಫಲ್ ತೆಗೆದುಕೊಂಡು ಹೋಗಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಆ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಮೇ 24 ರಂದು ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷದ ಯುವಕ 19 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದಿದ್ದ.
ಅಮೆರಿಕದ ಶಾಲೆಗಳಲ್ಲಿ ಶೂಟೌಟ್‌ನ ಕರಾಳ ಇತಿಹಾಸದಲ್ಲಿಯೇ ಅತ್ಯಂತ ಕ್ರೂರ ಕೃತ್ಯ ಎಂದು ಬಣ್ಣಿಸಲಾಗಿದೆ. ಅಸುನೀಗಿದವರ ಪೈಕಿ 7ರಿಂದ ಹತ್ತು ವರ್ಷದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪೊಲೀಸರ ಜತೆಗೆ ಗುಂಡಿನ ಚಕಮಕಿಯಲ್ಲಿ ದುಷ್ಕರ್ಮಿ ಸಾವಿಗೀಡಾಗಿದ್ದಾನೆ.
ಇದನ್ನೂ ಓದಿ:ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?
ಅಂಗಡಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಾಲ್ವಡೋರ್ ರಾಮೋಸ್ (18) ಎಂಬಾತ ಈ ಕೃತ್ಯವೆಸಗಿದ್ದಾನೆ. ಟೆಕ್ಸಾಸ್ ಸರ್ಕಾರ ನೀಡಿದ ಮಾಹಿತಿ ಪ್ರಕಾರ ದಾಳಿಕೋರ ಆದೇ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಆತ ಒಂದು ಕೈಯ್ಯಲ್ಲಿ ಪಿಸ್ತೂಲ್ ಮತ್ತು ಸೆಮಿ ಆಟೋ ಮ್ಯಾಟಿಕ್ ಗನ್ ಹಿಡಿದುಕೊಂಡು ಪ್ರಾಥಮಿಕ ಶಾಲೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾನೆ.
ಕಾರಣವೇನು?
ಶಾಲೆಯಲ್ಲಿ ಸಾಲ್ವಡೋರ್‌ನನ್ನು ಸ್ನೇಹಿತರು ತಮಾಷೆ ಮಾಡುತ್ತಿದ್ದ ಕಾರಣ ಆತ ಕ್ರುದ್ಧಗೊಂಡಿದ್ದ. ಅದಕ್ಕೆ ಪೂರಕವಾಗಿ ಆತ ಶೀಘ್ರ ಕೋಪಿಯೂ ಆಗಿದ್ದ. ಘಟನೆಯಿಂದ ಆಕ್ರೋಶಗೊಂಡಿದ್ದ ಆತ ಗುಂಡು ಹಾರಿಸಿದ್ದಾನೆ.
ಅಜ್ಜಿಗೆ ಗುಂಡು ಹಾರಿಸಿದ್ದ: ಪ್ರಾಥಮಿಕ ಶಾಲೆಗೆ ನುಗ್ಗಿ ಗುಂಡು ಹಾರಿಸುವುದಕ್ಕೆ ಮೊದಲು ಸಾಲ್ವಡೋರ್ ರಾಮೋಸ್ ತನ್ನ ಅಜ್ಜಿಗೇ ಗುಂಡು ಹಾರಿಸಿದ್ದ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಆಕೆಯ ವಯಸ್ಸು 66. ಗುಂಡೇಟಿನಿಂದ ಗಾಯಗೊಂಡ ಅಜ್ಜಿಯನ್ನು ಸ್ಯಾನ್ ಆ್ಯಂಟೋನಿಯೋದಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಜ್ಜಿಯನ್ನು ಕೊಲ್ಲಲು ಯತ್ನಿಸಿದ ಬಳಿಕ ಗುಂಡು ನಿರೋಧಕ ಜಾಕೆಟ್ ಧರಿಸಿ ಶಾಲೆಯತ್ತ ತೆರಳಿದ್ದ.