Advertisement

ದೇಶಾದ್ಯಂತ ಸೆಪ್ಟೆಂಬರ್ 25ರಿಂದ ಮತ್ತೆ ಲಾಕ್ ಡೌನ್ ಇಲ್ಲ: ಫ್ಯಾಕ್ಟ್ ಚೆಕ್ ನಲ್ಲಿ ಸತ್ಯ ಬಯಲು

10:03 AM Sep 15, 2020 | Nagendra Trasi |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಸೋಂಕು ದಿನೇ ದಿನೆ ತೀವ್ರವಾಗಿ ಏರುತ್ತಿರುವುದರಿಂದ, ಸೆ. 25ರಿಂದ ಮತ್ತೆ 46 ದಿನಗಳ ದಿಗ್ಬಂಧನ ಹೇರಲಾಗುತ್ತದೆ! ಹೀಗೊಂದು ವದಂತಿ ಸಾಮಾಜಿಕ ತಾಣಗಳಲ್ಲಿ ಜೋರಾಗಿದೆ. ಇದನ್ನು ಸ್ವತಃ ಪ್ರೆಸ್ ಬ್ಯೂರೋ ಆಫ್ ಇಂಡಿಯಾ (ಪಿಐಬಿ) ನಿರಾಕರಿಸಿದೆ.

Advertisement

ಅಂತಹ ಯಾವುದೇ ಪ್ರಸ್ತಾವಗಳು ಸರಕಾರದ ಮುಂದಿಲ್ಲ ಎಂದು ಖಚಿತಪಡಿಸಿದೆ. ಸದ್ಯ ಸಾಮಾಜಿಕ ತಾಣಗಳಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ್ದೆಂದು (ಎನ್‌ಡಿಎಂಎ) ಹೇಳಲಾಗಿರುವ ಆದೇಶದ ಪ್ರತಿಯೊಂದು ಓಡಾಡುತ್ತಿದೆ. ಅದರ ಪ್ರಕಾರ, ಎನ್‌ಡಿಎಂಎ, ಯೋಜನಾ ಆಯೋಗದ ಜತೆ ಸೇರಿ, ಸೆ. 25ರ ಮಧ್ಯರಾತ್ರಿಯಿಂದ ಮತ್ತೆ 46 ದಿನಗಳ ಕಾಲ ದಿಗ್ಬಂಧನ ಜಾರಿ ಮಾಡಬೇಕೆಂದು, ಸ್ವತಃ ಪ್ರಧಾನಮಂತ್ರಿ ಕಚೇರಿ, ಕೇಂದ್ರ ಗೃಹಕಚೇರಿಗೇ ನಿರ್ದೇಶನ ನೀಡಿದೆ!

ಹೀಗೆ ಎಲ್ಲೆಡೆ ಮತ್ತೆ ಲಾಕ್ ಡೌನ್ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಎನ್‌ಡಿಎಂಎ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟವಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ನಲ್ಲಿ ಇಂತಹ ಯಾವುದೇ ಆದೇಶ ಕೇಂದ್ರ ಸರ್ಕಾರ ಹೊರಡಿಸಿಲ್ಲ ಎಂದು ಪಿಐಬಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next