Advertisement

ಮಿಜೋರಾಂನಲ್ಲಿ ಕೈಗೆ ಮತ್ತೂಂದು ಹಿನ್ನಡೆ

06:00 AM Nov 06, 2018 | Team Udayavani |

ಗುವಾಹಟಿ/ಹೊಸದಿಲ್ಲಿ: ಈ ತಿಂಗಳ 28ರಂದು ಚುನಾವಣೆ ನಡೆಯಲಿರುವ ಮಿಜೋರಾಂನಲ್ಲಿ ಸ್ಪೀಕರ್‌ ಆಗಿರುವ ಹೈಫಿ (81)  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಏಳು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿರುವ ಅವರು ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಲಿಲ್ಲ ಎಂದು ಆಕ್ರೋಶಗೊಂಡು ಈ ಕ್ರಮ ಕೈಗೊಂಡಿದ್ದಾರೆ.

Advertisement

ಸೆಪ್ಟಂಬರ್‌ನಿಂದ ಈಚೆಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿರುವ ಐದನೇ ನಾಯಕರಿವರು. ಬೆಳಗ್ಗೆ ಅಸೆಂಬ್ಲಿ ಭವನಕ್ಕೆ ಆಗಮಿಸಿದ ಹೈಫಿ ಡೆಪ್ಯುಟಿ ಸ್ಪೀಕರ್‌ ಆರ್‌. ಲಾಲಿÅನ್ವಾಮಾ ಅವರಿಗೆ ಸ್ಪೀಕರ್‌ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ನೀಡಿ ಸಂಬಂಧಿತ ಪತ್ರ ಹಸ್ತಾಂತರಿಸಿದರು. ಬಳಿಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿಗೆ ಆಗಮಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ವಿದಾಯ ಹೇಳಿದ್ದಾರೆ. 

ಈ ನಡುವೆ ಗುವಾಹಟಿಯಲ್ಲಿ ಮಾತನಾಡಿದ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಇಡಿಎ) ನಾಯಕ ಮತ್ತು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ, ಹೈಫಿ ಬಿಜೆಪಿ ಸೇರಿದ್ದಾರೆ ಎಂದು ಪ್ರಕಟಿಸಿದ್ದಾರೆ. ಅವರು ಪಕ್ಷ ಸೇರಿರುವುದರಿಂದ ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದಿದ್ದಾರೆ. 
 
ಪಿಎಂಗೆ ಪತ್ರ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಮಿಜೋರಾಂ ಮುಖ್ಯಮಂತ್ರಿ ಲಾಲ್ತನ್‌ ಪ್ರಧಾನಿ ಮೋದಿಗೆ ಪತ್ರ ಬರೆದು ಮುಖ್ಯ ಚುನಾವಣಾ ಧಿಕಾರಿ ಎಸ್‌.ಬಿ.ಶಶಾಂಕ್‌ರನ್ನು ಕೂಡಲೇ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಬಿಜೆಪಿ 2ನೇ ಪಟ್ಟಿ: ಮಧ್ಯಪ್ರದೇಶ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಸೋಮವಾರ ಇಬ್ಬರು ಮಹಿಳಾ ನಾಯಕಿಯರು ಸೇರಿದಂತೆ 17 ಮಂದಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. 

2 ಪಟ್ಟಿಯಲ್ಲಿ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಸಂಬಂಧಿ ಅನೂಪ್‌ ಮಿಶ್ರಾ ಸೇರಿದ್ದಾರೆ. ಹೀಗಾಗಿ 230 ಸ್ಥಾನಗಳ ಪೈಕಿ 194 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next