ಬಂಟ್ವಾಳ: ಕೋವಿಡ್-19 ಸೋಂಕು ದೃಢಪಟ್ಟು ಬಂಟ್ವಾಳದ ಮಹಿಳೆ ಮೃತಪಟ್ಟ ಆತಂಕದ ನಡುವೆಯೇ ಬಂಟ್ವಾಳದ ಮತ್ತೋರ್ವ ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಕುರಿತು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದೆ.
67 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಕಳೆದ ಕೆಲವು ದಿನಗಳಿಂದ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಲಿ ಕೋವಿಡ್-19 ಸೋಂಕು ದೃಢಪಟ್ಟ ಮಹಿಳೆ ಇತ್ತೀಚೆಗೆ ಮೃತಪಟ್ಟ ಮಹಿಳೆಯ ನೆರೆ ಮನೆಯವರು ಎನ್ನಲಾಗಿದೆ. ಇವರಿಬ್ಬರು ಜೊತೆಯಾಗಿ ಖಾಸಗಿ ವೈದ್ಯರ ಬಳಿಗೆ ಔಷಧಿಗಾಗಿ ತೆರಳಿದ್ದರು ಎಂಬ ಮಾಹಿತಿಯಿದೆ.
ಆದರೆ ಮೃತಪಟ್ಟ ಮಹಿಳೆಗಿಂತ ಮೊದಲೇ ಇಂದು ಕೋವಿಡ್-19 ಸೋಂಕು ದೃಢಪಟ್ಟ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು.
ರಾಜ್ಯದಲ್ಲಿ ಇಂದು ಒಟ್ಟು ಏಳು ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ರಾಜ್ಯದ್ಲಲಿ ಒಟ್ಟು ಸೋಂಕಿತರ ಸಂಖ್ಯೆ 415 ಆಗಿದ್ದು, 17 ಸೋಂಕಿತರು ನಿಧನರಾಗಿದ್ದಾರೆ. ಒಟ್ಟು 114 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.