Advertisement

ವಿಜಯಪುರ ಮೃತವ್ಯಕ್ತಿಗೆ ಸೋಂಕು ದೃಢ: ಜಿಲ್ಲೆಯಲ್ಲಿ ಏಳಕ್ಕೇರಿದ ಸೋಂಕಿತರ ಸಂಖ್ಯೆ

01:18 PM Apr 14, 2020 | keerthan |

ವಿಜಯಪುರ : ಭಾನುವಾರ ನಗರದಲ್ಲಿ ಸಾವವಿಗೀಡಾದ ವಿಜಯಪುರದ ವ್ಯಕ್ತಿಗೂ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಮಂಗಳವಾರ ರಾಜ್ಯ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ಮತ್ತೊಬ್ಬನ ಹೆಸರೂ ಸೇರಿದೆ.

Advertisement

ಜಿಲ್ಲೆಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾದ p-221 ಸಂಖ್ಯೆಯ ವೃದ್ಧೆಯ ಪತಿ 69 ವರ್ಷದ ವ್ಯಕ್ತಿಯನ್ನು ಸೋಂಕಿತ ಸಂಖ್ಯೆ 257 ಎಂದು ಗುರುತಿಸಲಾಗಿದೆ.

ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 7ಕ್ಕೆ ಏರಿದ್ದಲ್ಲದೇ, ಮಂಗಳವಾರ ಸಾವಿನ ಖಾತೆಯನ್ನು ತೆರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next