ಹರ್ಯಾಣ: ಕಳೆದ ತಿಂಗಳು ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಬಂಧಿಸಿದ್ದಾರೆ ಇದರೊಂದಿಗೆ ಆರೋಪಿಗಳನ್ನು ಬಂಧಿಸಲು ನುಹ್ ಪೊಲೀಸರು ಒಂದು ವಾರದಲ್ಲಿ ನಡೆಸಿದ ಮೂರನೇ ಎನ್ಕೌಂಟರ್ ಇದಾಗಿದೆ ಎನ್ನಲಾಗಿದೆ.
ಬಂಧಿತ ವ್ಯಕ್ತಿಯನ್ನು ಒಸಾಮಾ ಅಲಿಯಾಸ್ ಪೆಹೆಲ್ವಾನ್ ಎನ್ನಲಾಗಿದ್ದು, ನಲ್ಹಾರ್‌ನಲ್ಲಿ ಬೆಂಕಿ ಹಚ್ಚಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.
ಒಸಾಮಾ ನನ್ನ ಪೊಲೀಸರು ಬಂಧಿಸಲು ಉಜಿನಾ ಡ್ರೈನ್ ಬಳಿ ಹೋದ ವೇಳೆ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ ಎನ್ನಲಾಗಿದೆ ಈ ವೇಳೆ ಪೊಲೀಸರು ಒಸಾಮಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಕಾಲಿಗೆ ಗಾಯಗೊಂಡಿದ್ದ ಒಸಾಮಾನನ್ನು ನಲ್ಹಾರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಧಿತನಿಂದ ಒಂದು ನಾಡ ಪಿಸ್ತೂಲ್, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ನುಹ್ ಹಿಂಸಾಚಾರಕ್ಕೆ ಸಂಬಂಧಿಸಿ ಮಂಗಳವಾರ ಮುಂಜಾನೆ, ಜಿಲ್ಲೆಯ ತೌರು ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು ಇದೀಗ ಮತ್ತೋರ್ವ ಆರೋಪಿಯ ಕಾಲಿಗೆ ಗುಂಡು ಹಾರಿಸುವ ಮೂಲಕ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: California: ಬಾರ್ ನಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ… 5 ಮೃತ್ಯು, 6 ಮಂದಿ ಆಸ್ಪತ್ರೆಗೆ