Advertisement

ಮೀನಾ ಬಜಾರ್‌ ನಿರ್ದೇಶಕರ ಕಾಫಿ ಬ್ರೇಕ್‌

09:08 AM Apr 04, 2020 | Suhan S |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, “ಮೀನಾಬಜಾರ್‌ ಡಾಟ್‌ ಕಾಮ’ ಎಂಬ ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆರಂಭದಲ್ಲಿ ಸಾಲು ಸಾಲು ಸಿನಿಮಾಗಳ ನಡುವೆ ಬರುವುದು ಬೇಡ ಎಂದು ಸುಮ್ಮನಿದ್ದ ಚಿತ್ರತಂಡಕ್ಕೆ ಇದೀಗ ಕೋವಿಡ್ 19 ಬಿಸಿಯೂ ತಾಗಿದೆ. ಈಗ ಚಿತ್ರದ ಬಿಡುಗಡೆ ಅನಿರ್ಧಿಷ್ಟಾವಧಿ ಕಾಲ ಮುಂದಕ್ಕೆ ಹೋಗಿದೆ.

Advertisement

ಈ ಗ್ಯಾಪ್‌ನಲ್ಲೇ ಆ ಚಿತ್ರದ ನಿರ್ದೇಶಕ ಸುನೀಲ್‌ ರಾಣಾ ಅವರು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ.ಈ ನಿಟ್ಟಿನಲ್ಲಿ ಅವರು ಬರವಣಿಗೆಯ ಕೆಲಸವನ್ನೂ ಸಹ  ಶುರುಮಾಡಿದ್ದಾರೆ. ಅಂದಹಾಗೆ, ಅವರು ಹೊಸ ಸಿನಿಮಾಗೆ ಸ್ಕ್ರಿಪ್ಟ್ ಬರೆಯ ತೊಡಗಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ.

ಆ ಕೆಲಸ ಜೋರಾಗಿಯೇ ಸಾಗುತ್ತಿದ್ದು, ಇಷ್ಟರಲ್ಲೇ ಆ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇನ್ನು, ಸುನೀಲ್‌ ರಾಣಾ ಅವರು ಶುರು ಮಾಡಲಿರುವ ಹೊಸ ಸಿನಿಮಾಗೆ ಶೀರ್ಷಿಕೆ ಕೂಡ ಪಕ್ಕಾ ಆಗಿದೆ. ಆ ಚಿತ್ರಕ್ಕೆ “ದಿ ಕಾಫಿ ಬ್ರೇಕ್‌’ ಎಂಬ ಹೆಸರನ್ನಿಟ್ಟಿದ್ದಾರೆ. ಅವರ “ಮೀನಾಬಜಾರ್‌ ಡಾಟ್‌ ಕಾಮ’ ಚಿತ್ರವು ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದ್ದಂತೆಯೇ, ಈ ಸಿನಿಮಾಗೆ ಚಾಲನೆ ಕೊಡಲಿದ್ದಾರೆ. ಇದು ಕೂಡ ಒಂದು ಥ್ರಿಲ್ಲರ್‌ ಚಿತ್ರವಾಗಿದ್ದು, ಈಗಿನ ಯೂಥ್‌ ಮನಸ್ಥಿತಿ ಯಿರುವ ಕಥಾಹಂದರ ಹೊಂದಿದ್ದು, ಜೊತೆಯಲ್ಲಿ ಒಂದಷ್ಟು ಟ್ವಿಸ್ಟ್‌ಗಳೂ ಇರಲಿವೆಯಂತೆ. ಸದ್ಯಕ್ಕೆ ಅವರು “ಮೀನಾಬಜಾರ್‌ ಡಾಟ್‌ ಕಾಮ’ ಸಿನಿಮಾ ಬಿಡುಗಡೆಯ ಎದುರು ನೋಡುತ್ತಿದ್ದು, ಆ ಚಿತ್ರ ಇನ್ನೇನು ಬಿಡುಗಡೆಯಾ ಗುತ್ತಿದ್ದಂತೆಯೇ, ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲು ಸಜ್ಜಾಗುತ್ತಿದ್ದಾರೆ ನಿರ್ದೇಶಕ ಸುನೀಲ್‌ ರಾಣಾ.

ಸದ್ಯಕ್ಕೆ ರಿಲೀಸ್‌ ಆಗಿರುವ ಅವರ ನಿರ್ದೇಶನ, ನಿರ್ಮಾಣ ನಟನೆಯ “ಮೀನಾಬಜಾರ್‌ ಡಾಟ್‌ ಕಾಮ’ ಚಿತ್ರದ ಟ್ರೇಲರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದು ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ಬಿಡುಗಡೆ ಯಾಗುತ್ತಿದೆ. ಬಹುತೇಕ ಯುವಕರನ್ನೇ ಟಾರ್ಗೆಟ್‌ ಮಾಡಿ ಮಾಡಿರುವ ಚಿತ್ರವಾದ್ದರಿಂದ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.­

Advertisement

Udayavani is now on Telegram. Click here to join our channel and stay updated with the latest news.

Next