Advertisement

ಕಲಬುರಗಿಯ ಮತ್ತೊಬ್ಬ ಶಾಸಕರಿಗೆ ಕೋವಿಡ್ ಪತ್ತೆ: ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ ಶಾಸಕರು

05:29 PM Jul 10, 2020 | keerthan |

ಕಲಬುರಗಿ: ಜಿಲ್ಲೆಯ ಬಿಜೆಪಿ ಶಾಸಕರೊಬ್ಬರಿಗೆ ಗುರುವಾರ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ ಮತ್ತೊಬ್ಬ ಶಾಸಕರಿಗೂ ವೈರಾಣು ತಾಗಿರುವುದು ಪತ್ತೆಯಾಗಿದೆ.

Advertisement

ಜೇವರ್ಗಿ ಶಾಸಕ, ವಿಧಾನಸಭೆಯಲ್ಲಿನ ಕಾಂಗ್ರೆಸ್ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ಅವರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ‌ಈ ವಿಷಯವನ್ನು ಸ್ವತಃ ಶಾಸಕರೇ ಟ್ವೀಟ್ ಮಾಡುವ ಮ‌ೂಲಕ ಖಚಿತ ಪಡಿಸಿದ್ದಾರೆ.

ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ‌ನನಗೆ ಕೋವಿಡ್ ರೋಗ ಲಕ್ಷಣಗಳು ಇಲ್ಲ.‌ ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿ ಇರಲಿದ್ದೇನೆ. ನನ್ನ ಪ್ರಾಥಮಿಕ ಸಂಕರ್ಪಕ್ಕೆ ಬಂದವರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ ಎಂದು ಶಾಸಕ ಡಾ.ಅಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಸದ್ಯ ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next