ನವದೆಹಲಿ: ಇತ್ತೀಚೆಗೆ ಜಮ್ಮು ಪ್ರದೇಶದಲ್ಲಿ ಮತ್ತು ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಸೇನೆಯ ಎಸ್ ಎಸ್ ಜಿ(Special Service Group) ಕೈವಾಡ ಇದ್ದಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಜಮ್ಮು-ಕಾಶ್ಮೀರದಲ್ಲಿ 600 ಪಾಕ್ ಆರ್ಮಿ ಕಮಾಂಡೋಸ್ ಒಳನುಸುಳಿರುವ ಸಾಧ್ಯತೆ ಇದ್ದು, ಮತ್ತೊಂದು ಕಾರ್ಗಿಲ್ ಮಾದರಿಯ ಯುದ್ಧಕ್ಕೆ ಎಡೆಮಾಡಿಕೊಡುವ ಆತಂಕ ಎದುರಾಗಿರುವುದಾಗಿ ವರದಿ ವಿವರಿಸಿದೆ.
ಮೂಲಗಳ ಪ್ರಕಾರ, ಈ ದಾಳಿಯ ಪ್ರಮುಖ ಸೂತ್ರಧಾರಿಯೇ ಪಾಕಿಸ್ತಾನ ಆರ್ಮಿಯ ಎಸ್ ಎಸ್ ಜಿ ಕಮಾಂಡೋಸ್ ನ ಅದಿಲ್ ರಹಮಾನಿ ಎಂದು ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದೇ ಅದಿಲ್ ರಹಮಾನಿ ಎಂಬ ಮಾಹಿತಿ ಬಯಲಾಗಿರುವುದಾಗಿ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಸೇನೆ ನೇರವಾಗಿ ಶಾಮೀಲಾಗಿರುವುದು ಖಚಿತವಾಗಿದೆ ಎಂದು ವರದಿ ಹೇಳಿದೆ. ಇದೊಂದು ರಹಸ್ಯ ಯುದ್ಧ ತಂತ್ರವಾಗಿದ್ದು, ಇದಕ್ಕೆ ಭಾರತ ಕೂಡ ತಕ್ಕ ತಿರುಗೇಟು ನೀಡಬೇಕು ಎಂದು ಮಾಜಿ ಡಿಜಿಪಿ ಡಾ. ಎಸ್ ಪಿ ವೈದ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ರಹಸ್ಯ ಕಾರ್ಯಾಚರಣೆಗಾಗಿ ಅದಿಲ್ ರಹಮಾನಿ ಮೇಲ್ವಿಚಾರಣೆಯಲ್ಲಿ ಸುಮಾರು 600 ಮಂದಿ ಎಸ್ ಎಸ್ ಜಿ ಕಮಾಂಡೋಸ್ ಗಳನ್ನು ನಿಯೋಜಿಸಿರುವುದಾಗಿ ಡಾ.ಎಸ್ ಪಿ ವೈದ್ ತಿಳಿಸಿದ್ದಾರೆ. ಇವರೆಲ್ಲರು ಉನ್ನತ ಶ್ರೇಣಿಯ ತರಬೇತಿ ಪಡೆದಿದ್ದು, ಈಗಾಗಲೇ ನೂರಾರು ಮಂದಿ ಭಾರತದೊಳಕ್ಕೆ ಪ್ರವೇಶಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ODI Series: ಲಂಕಾಗೆ ಬಂದಿಳಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ; ಅಭ್ಯಾಸ ಆರಂಭ