Advertisement

Dubai: ದುಬೈನಲ್ಲಿ ಮತ್ತೂಂದು ಬೃಹತ್‌ ವಿಮಾನ ನಿಲ್ದಾಣ?

10:48 PM Nov 15, 2023 | Team Udayavani |

ದುಬೈ: ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಹೊಂದಿರುವ ದುಬೈ, ಈಗ ಹೊರವಲಯದಲ್ಲಿ ಮತ್ತಷ್ಟು ವಿಶಾಲವಾದ ಹೊಸ ಏರ್‌ಪೋರ್ಟ್‌ ನಿರ್ಮಿಸಲು ಮುಂದಾಗಿದೆ. 2030ರ ವೇಳೆಗೆ ಇದರ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ಸರ್ಕಾರ ಹೇಳಿದೆ.

Advertisement

ದುಬೈನಲ್ಲಿ ನಡೆದ ಏರ್‌ ಶೋ ವೇಳೆ ಬುಧವಾರ ಈ ಮಾಹಿತಿ ನೀಡಿದ ದುಬೈ ವಿಮಾನ ನಿಲ್ದಾಣಗಳ ಸಿಇಒ ಪಾಲ್‌ ಗ್ರಿಫಿತ್ಸ್, “ದುಬೈನ ಹೊರವಲಯದಲ್ಲಿ ಅಲ್‌ ಮಕ್ತೌಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು. 2030ರ ವೇಳೆ ಇದು ಆರಂಭವಾಗಲಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ತಿಳಿಸಿದ್ದಾರೆ.

“ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರ್ಷಿಕ ಪ್ರಯಾಣಿಕರ ಸಂಖ್ಯೆ 12 ಕೋಟಿ ದಾಟುತ್ತಿದ್ದಂತೆ ನೂತನ ದೊಡ್ಡ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವ ಅಗತ್ಯವಿತ್ತು” ಎಂದು ಪಾಲ್‌ ಗ್ರಿಫಿತ್ಸ್ ಹೇಳಿದ್ದಾರೆ. “ಕೊರೊನಾ ನಂತರ ದುಬೈ ಪ್ರವಾಸೋದ್ಯಮ ಸಹಜ ಸ್ಥಿತಿಗೆ ಮರಳಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next