Advertisement
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿಕಾಂತ ನಾಯಕ, ಹುಕ್ಕೇರಿ ಮತಕ್ಷೇತ್ರದಿಂದ ಟಿಕೆಟ್ ನೀಡದಿರುವುದು ಹಾಗೂ ಕತ್ತಿ ಕುಟುಂಬದ ಕಿರುಕುಳದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಯಮಕನಮರಡಿ ಉಸ್ತುವಾರಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು.
Related Articles
Advertisement
ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕೆಂದು ಮೊದಲ ಬಾರಿಗೆ ಅಧಿವೇಶ ನಡೆಸಿ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದರಿಂದ ನಿರಂತರ ಕಾರ್ಯ ಚಟುವಟಿಕೆ ಮಾಡಲು ಸಾಧ್ಯವಾಯಿತು. ಉಮೇಶ ಕತ್ತಿ ಬಿಜೆಪಿಗೆ ಬಂದ ಬಳಿಕ ಕೇವಲ 11 ತಿಂಗಳು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ನನ್ನ ಅವಧಿಯಲ್ಲಿ ಪಂಚಾಯತ್ ಕೆಲಸ ಉತ್ತಮ ಆಗಿದ್ದಕ್ಕೆ ಚಿನ್ನದ ಪದಕ ಬಂದಿತ್ತು. ಪಕ್ಷ ನೀಡಿದ ಕೆಲಸವನ್ನು ನಾನು ಸರಿಯಾಗಿ ಮಾಡಿದ್ದೇನೆ. ಆದರೆ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆಎಂದು ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖಂಡರಾದ ಆರ್.ಕೆ. ಪಾಟೀಲ, ಶಿವಕುಮಾರ ನಾಯಿಕ, ಗುಂಡು ಪಾಟೀಲ, ಗುರುಸಿದ್ಧ ಮೂಡಲಗಿ, ರಾಮನಗೌಡ ಪಾಟೀಲ, ಷಣ್ಮುಖ ಕೆ.ಎಸ್. ಸುದ್ದಿಗೋಷ್ಠಿಯಲ್ಲಿ ಇದ್ದರು.