Advertisement

ರಕ್ಷಣಾ ಸಿಬ್ಬಂದಿ ಬಂಧನ

11:37 PM Sep 17, 2020 | mahesh |

ರೇವಾರಿ: ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ಒಡ್ಡಿದ ಬಲೆಗೆ ಮತ್ತೂಬ್ಬ ಬಿದ್ದಿದ್ದಾನೆ. ಉತ್ತರ ಪ್ರದೇಶದ ರೇವಾರಿಯ ಮಿಲಿಟರಿ ಎಂಜಿನಿಯರಿಂಗ್‌ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್‌ ಕುಮಾರ್‌ ಎಂಬ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ಪ್ರಮುಖ ಮಾಹಿತಿ ರವಾನೆ ಮಾಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.

Advertisement

2 ವರ್ಷಗಳಿಂದ ಮಹೇಶ್‌ ನೆರೆರಾಷ್ಟ್ರದ ಮಿಲಿಟರಿ ಇಂಟೆಲಿಜೆನ್ಸ್‌ನ ಪ್ರತಿನಿಧಿಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದ. ಆತ ನೀಡುತ್ತಿದ್ದ ಮಾಹಿತಿಗೆ ತಕ್ಕಂತೆ ಹಣವೂ ಪಾವತಿಯಾಗುತ್ತಿತ್ತು. ಕುಮಾರ್‌ ತನ್ನ ಮೊಬೈಲ್‌ ಮೂಲಕ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಮಾಹಿತಿ ಜೂನ್‌ನಲ್ಲಿ ಲಕ್ನೋದ ಮಿಲಿಟರಿ ಗುಪ್ತಚರ ವಿಭಾಗಕ್ಕೆ ಸಿಕ್ಕಿತ್ತು. ಪಾಕ್‌ನ ಮಹಿಳೆಗೆ ಈತ ಮಾಹಿತಿ ರವಾನಿಸುತ್ತಿದ್ದ. ಮತ್ತೆ ಆಕೆಯನ್ನು ಮ್ಯಾಡಂ ಎಂದೇ ಆತ ಕರೆಯುತ್ತಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next