Advertisement

ರಾಹುಲ್‌ ವಿರುದ್ಧ ಹೊಸ ಮಾನಹಾನಿ ಕೇಸ್‌

10:13 PM Apr 01, 2023 | Team Udayavani |

ನವದೆಹಲಿ:ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಬಂದೊದಗುತ್ತಿದೆ. ಮಾನಹಾನಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಸಂಸತ್‌ ಸದಸ್ಯತ್ವವನ್ನೂ ಕಳೆದುಕೊಂಡ ರಾಹುಲ್‌ ವಿರುದ್ಧ ಈಗ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

Advertisement

ಜನವರಿಯಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಯುತ್ತಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ ರಾಹುಲ್‌ ವಿರುದ್ಧ ಆರೆಸ್ಸೆಸ್‌ ಕಾರ್ಯಕರ್ತ ಕಮಲ್‌ ಭದೂರಿಯಾ ಎಂಬವರು ಸಲ್ಲಿಸಿದ ದೂರಿನ ಮೇರೆಗೆ ಉತ್ತರಾಖಂಡದ ಹರಿದ್ವಾರದ ಕೋರ್ಟ್‌ನಲ್ಲಿ ಕೇಸು ದಾಖಲಾಗಿದೆ.

ಜೋಡೋ ಯಾತ್ರೆ ವೇಳೆ ಹರ್ಯಾಣದ ಅಂಬಾಲದಲ್ಲಿ ಮಾತನಾಡಿದ್ದ ರಾಹುಲ್‌, “ಖಾಕಿ ಬಣ್ಣ ಚಡ್ಡಿ ಧರಿಸುವವರು, ಕೈಯ್ಯಲ್ಲಿ ಲಾಠಿ ಹಿಡಿಯುವವರು, ಶಾಖಾಗಳನ್ನು ನಡೆಸುವವರು 21ನೇ ಶತಮಾನದ ಕೌರವರು. ದೇಶದ 2-3 ಕೋಟ್ಯಧಿಪತಿಗಳು ಕೂಡ ಈ ಕೌರವರೊಂದಿಗೆ ಕೈಜೋಡಿಸಿದ್ದಾರೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಏ.12ರಂದು ವಿಚಾರಣೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next