Advertisement

ಕೋವಿಡ್‌ 19 ಸೋಂಕಿಗೆ ಮತ್ತೊಂದು ಬಲಿ

07:09 AM Jun 24, 2020 | Lakshmi GovindaRaj |

ಹೊಸಕೋಟೆ: ನಗರದಲ್ಲಿ ಕೋವಿಡ್‌ 19 ಸೋಂಕಿನಿಂದ 80 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಜತೆಗೆ ಒಂದೇ ದಿನ ಒಟ್ಟು 8 ಪ್ರಕರಣ ದೃಢಪಟ್ಟಿದ್ದು, ಹೊಸಕೋಟೆಯಲ್ಲಿ ಒಂದು ಹಾಗೂ ನೆಲಮಂಗಲದಲ್ಲಿ 7 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ  ಸಂಖ್ಯೆ 38ಕ್ಕೇರಿದೆ.

Advertisement

ಜೂ.19ರಂದು ನಗರದ 19ನೇ ವಾರ್ಡ್‌ನ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಸೋಂಕಿತ  ಮಹಿಳೆಯನ್ನು ಬೆಂಗಳೂರಿನ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. 18ನೇ ವಾರ್ಡ್‌ನಲ್ಲಿ ವಾಸಿಸುತ್ತಿರುವ 49 ವರ್ಷ ವಯಸ್ಸಿನ ವೈದ್ಯರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜೂ.20ರಂದು ಮೊದಲ ಬಾರಿಗೆ ನಗರದ 28ನೇ  ವಾರ್ಡಿನಲ್ಲಿ 60 ವರ್ಷದ ಮಹಿಳೆ ಮೃತಪಟ್ಟಿದ್ದು, ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಮಂಗಳವಾರ ಮೃತಪಟ್ಟಿರುವ ಮಹಿಳೆ ಪುತ್ರ, ಸೊಸೆ, ಇಬ್ಬರು ಮೊಮ್ಮಕ್ಕಳನ್ನು ತಪಾಸಣೆ ನಡೆಸಿದ್ದು, ವರದಿಯ ಫ‌ಲಿತಾಂಶ ನಿರೀಕ್ಷಿಸಲಾಗುತ್ತಿದೆ. ಇದರೊಂದಿಗೆ ರೋಗ ಲಕ್ಷಣಗಳಿರುವ ಸಂಬಂಧಿತ 70 ವರ್ಷದ ವ್ಯಕ್ತಿಯನ್ನು ತಪಾಸಣೆ ಮಾಡಲಾಗಿದೆ. ನಗರದಲ್ಲಿ ಇದುವರೆಗೂ 6 ತಾಲೂಕಿನಲ್ಲಿ ಜಡಿಗೇನಹಳ್ಳಿ, ಆಲಪ್ಪನಹಳ್ಳಿ ಸೇರಿದಂತೆ  ಒಟ್ಟು 8 ಕಂಟೈನ್‌ಮೆಂಟ್‌ ವಲಯಗಳಾಗಿವೆ. ಸೋಂಕಿತರ ಸಂಖ್ಯೆ ದಿನೆ ದಿನೇ ಏರಿಕೆಯಾಗುತ್ತಿದ್ದು, ನಿವಾಸಿಗಳಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.

ಒಂದೇ ದಿನ 7 ಕೋವಿಡ್‌ 19 ಪಾಸಿಟಿವ್‌
ನೆಲಮಂಗಲ: ಲಾಕ್‌ಡೌನ್‌ ಆರಂಭ ದಿಂದ ಮುಕ್ತಾಯದವರೆಗೂ ಕೋವಿಡ್‌ 19 ಸಮಸ್ಯೆಯಿಲ್ಲದ ನಗರಕ್ಕೆ ದಿನೆ ದಿನೆ ಪಾಸಿಟಿವ್‌ ಪ್ರಕರಗಣಗಳು ಹೆಚ್ಚಾಗುತ್ತಿದ್ದು, ಮತ್ತೆ ಲಾಕ್‌ಡೌನ್‌ಗೆ ತಿರ್ಮಾನಿಸಲಾಗಿದೆ ಎಂದು ಶಾಸಕ  ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ಮಂಗಳವಾರ ನಗರದ ಸುಭಾಷ್‌ ನಗರದ 52 ವರ್ಷ, 22 ವರ್ಷದ  ವ್ಯಕ್ತಿಗಳಿಗೆ ಹಾಗೂ 14 ವರ್ಷದ ಬಾಲಕಿಗೆ ಕೋವಿಡ್‌ 19 ಸೋಂಕು ತಗುಲಿದ್ದರೆ,

ಮೊದಲಕೋಟೆ 38 ವರ್ಷದ ಮಹಿಳೆ ಹಾಗೂ10 ವರ್ಷದ ಬಾಲಕ, ಅರಿಶಿನಕುಂಟೆಯ ಮಹಿಳೆ ಯೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಹ ಶೀಲ್ದಾರ್‌ ತಿಳಿಸಿದ್ದಾರೆ. ಅದರ ಜತೆ ಲೋಹಿತ್‌ ನಗರದ  ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಗೆ ತುಮಕೂರಿನ ಸರಕಾರಿ  ಆಸ್ಪತ್ರೆ  ಯಲ್ಲಿ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಸರಕಾರ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ಮಾಹಿತಿ ಸಂಖ್ಯೆ ನಮೂದಿಸಿಲ್ಲ.

Advertisement

ಲಾಕ್‌ಡೌನ್‌ ಸುಳಿವು: ಕೋವಿಡ್‌ 19 ಪಾಸಿಟಿವ್‌ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರವ ನ್ನು ಲಾಕ್‌ಡೌನ್‌ ಮಾಡುವುದು. ಪಾಸಿಟಿವ್‌ ಪ್ರಕರಣವಿರುವ ಬಡವಾಣೆ  ಸೀಲ್‌ಡೌನ್‌ ಮಾಡಲಾಗುತ್ತದೆ ಎಂದು  ಶಾಸಕರು ತಿಳಿಸಿದ್ದಾರೆ. ಜೂ.25ರಂದು ಮಧ್ಯಾಹ್ನ 12ಕ್ಕೆ ತಹಶೀಲ್ದಾರ್‌ ಎಸ್‌ಎಲ್‌ಆರ್‌ ಕಲ್ಯಾಣ ಮಂಟಪದಲ್ಲಿ ಸಂಘ ಸಂಸ್ಥೆಗಳು, ಅಧಿಕಾರಿಗಳನ್ನು ಸಭೆ ಕರೆದಿದ್ದು, ಲಾಕ್‌ಡೌನ್‌ ಮಾಡುವ ತೀರ್ಮಾನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next