Advertisement
ಗುರುವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯ ವೈ.ಎಂ.ಸತೀಶ್ ಪ್ರಶ್ನೋತ್ತರ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡಿದೆ. ಇದನ್ನು ತಡೆಯಲು ಕೈಗೊಂಡ ಕ್ರಮಗಳು ಫಲಿತಾಂಶ ಕೊಡಲಿಲ್ಲ. ಹೀಗಾಗಿ ಕೊಪ್ಪಳ ಜಿಲ್ಲೆ ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ಅದಕ್ಕೆ ವಿಸ್ತ್ರತ ಯೋಜನಾ ವರದಿ ಕೂಡ ಸಿದ್ದಗೊಂಡಿದೆ.ಈಗಾಗಲೇ ಆಂಧ್ರದ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದೇನೆ. ಆಂಧ್ರದ ಇಂಜಿನೀಯರ್ ತಂಡ ಬಂದು ಹೋಗಿದೆ. ಎರಡು ರಾಜ್ಯಗಳಿಗೂ ಅನುಕೂಲವಾಗುವಂತೆ ಕ್ರಮ ವಹಿಸಬೇಕಿದೆ. ಶೀಘ್ರದಲ್ಲಿಯೇ ಸರ್ವಪಕ್ಷಗಳ ಸಭೆಯನ್ನು ಕರೆದು ನಿರ್ಣಯ ಕೈಗೊಂಡು ತುಂಗಭದ್ರಾ ನದಿಯಲ್ಲಿನ ರಾಜ್ಯದ ಪಾಲಿನ ಎಲ್ಲ ನೀರನ್ನು ಬಳಸಿಕೊಂಡು ನಮ್ಮ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
Advertisement
ತುಂಗಭದ್ರೆಗೆ ಇನ್ನೊಂದು ಅಣೆಕಟ್ಟು ಅನಿವಾರ್ಯ: ಮುಖ್ಯಮಂತ್ರಿ ಬೊಮ್ಮಾಯಿ
06:31 PM Dec 22, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.