Advertisement

ಕೋವಿಡ್ ಗೆ ಮತ್ತೊಂದು ಸಾವು: 21ಕ್ಕೆ ಏರಿಕೆಯಾದ ಕೊಡಗಿನ ಕೋವಿಡ್ ಸಂಬಂಧಿ ಸಾವಿನ ಸಂಖ್ಯೆ

03:30 PM Aug 30, 2020 | keerthan |

ಕೊಡಗು: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 21ಕ್ಕೇರಿದೆ.

Advertisement

ಮಡಿಕೇರಿ ನಗರದ ಎಫ್ಎಂಕೆಎಂಸಿ ಕಾಲೇಜು ಬಳಿಯ ನಿವಾಸಿ 64 ವರ್ಷದ ಪುರುಷರೊಬ್ಬರು ಮಧುಮೇಹ ಕಾಯಿಲೆಯಿಂದ ಮತ್ತು ಕಾಲಿನಲ್ಲಿ ಆಗಿದ್ದ ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದು, ಆ.28ರ ರಾತ್ರಿ ಸುಸ್ತು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆ.29ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದನ್ನೂ ಓದಿ: ಹಟ್ಟಿ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಕ್ಕಳು ಸಹಿತ ಮೂವರು ನೀರುಪಾಲು

ಸುಸ್ತು ಮತ್ತು ಉಸಿರಾಟದ ತೊಂದರೆ ಇದ್ದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ಶುಕ್ರವಾರ ರಾತ್ರಿ 9.05 ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next