Advertisement

ಗುಹೆ ಬಂದಿ ಕಾರ್ಯಾಚರಣೆ :ಎಲ್ಲ 12 ಬಾಲಕರು, ಕೋಚ್‌ ಯಶಸ್ವೀ ರಕ್ಷಣೆ

03:26 PM Jul 10, 2018 | Team Udayavani |

ಬ್ಯಾಂಕಾಕ್‌: ಉತ್ತರ ಥಾಯ್ಲಂಡ್‌ನ‌ ಗುಹೆಯಲ್ಲಿ ಸಿಲುಕಿಕೊಂಡ ಬಾಲಕರನ್ನು ರಕ್ಷಿಸುವ ಇಂದಿನ ಮೂರನೇ ದಿನದ ಕಾರ್ಯಾಚರಣೆಯಲ್ಲಿ ಎಲ್ಲ 12 ಬಾಲಕರು ಮತ್ತು ಅವರ ಫ‌ುಟ್ಬಾಲ್‌ ಕೋಚ್‌ ಅನ್ನು  ರಕ್ಷಿಸಲಾಗಿದೆ ಎಂದು ಥಾಯ್‌ ನೌಕಾಪಡೆ ಅಧಿಕಾರಿಯನ್ನು ಉಲ್ಲೇಖೀಸಿ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. 

Advertisement

ಕಳೆದ ಎರಡು ದಿನಗಳ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಬಾಲಕರನ್ನು ರಕ್ಷಿಸಲಾಗಿತ್ತು. ಇಂದಿನ ಮೂರನೇ ದಿನದ ಕಾರ್ಯಾಚರಣೆಯಲ್ಲಿ  ಉಳಿದ ನಾಲ್ಕು ಬಾಲಕರು ಮತ್ತು ಅವರ ಫ‌ುಟ್ಬಾಲ್‌ ಕೋಚ್‌ ಅನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಇಂದು ಗುಹಾಪ್ರದೇಶದಲ್ಲಿ  ಭಾರೀ ಮಳೆಯಾದ ಕಾರಣ ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲು ಎದುರಾಗಿತ್ತು. ಮಳೆ ನಿರಂತರವಾಗಿ ಆಗುತ್ತಿದ್ದು ಅದು ಕಡಿಮೆಯಾಗುವ ಲಕ್ಷಣ ಇರಲಿಲ್ಲ.  ಹಾಗಿದ್ದರೂ ಪರಿಣತರು ಧೈರ್ಯ ಸಾಹಸದಿಂದ ಮುನ್ನುಗ್ಗಿ ಉಳಿದ ನಾಲ್ಕು ಬಾಲಕರು ಮತ್ತು  ಅವರ ಫ‌ುಟ್ಬಾಲ್‌ ಕೋಚ್‌ ಅನ್ನು ರಕ್ಷಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next