ಮಂಗಳೂರು: ನಗರದಲ್ಲಿ ಮಂಗಳವಾರ ಕಾಡುಕೋಣ ಸೆರೆ ಸಿಕ್ಕ ಬೆನ್ನಲ್ಲೇ ಬುಧವಾರ ಮತ್ತೂಂದು ಕಾಣಿಸಿಕೊಂಡಿದೆ. ನಗರದಲ್ಲಿ ಮತ್ತೊಂದು ಕಾಡುಕೋಣ ಇದೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರವೇ ಹರಿದಾಡಿತ್ತು. ಬಂಗ್ರ ಕೂಳೂರು ನದಿ ತೀರದಲ್ಲಿ ಕಾಡುಕೋಣ ಇದೆ ಎಂಬ ಮಾಹಿತಿಯನ್ನು ಸಾರ್ವಜನಿಕರು ಅರಣ್ಯ ಇಲಾಖೆಗೆ ನೀಡಿದ್ದು, ಪರಿಸರದಲ್ಲಿ ಬುಧವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆ ನಡೆಸಲಾಗಿತ್ತು. ಮಧ್ಯಾಹ್ನದ ವೇಳೆ ಕೂಳೂರು ಸೇತುವೆ ಬಳಿ ಕಾಣಿಸಿ ಕೊಂಡಿತಾದರೂ ಬಳಿಕ ಅಲ್ಲಿಂದ ಬೇರೆ ಕಡೆ ತೆರಳಿತ್ತು. ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದು, ಕಾಡಿಗಟ್ಟುವ ಕಾರ್ಯಾಚರಣೆ ರಾತ್ರಿ ವರೆಗೂ ಮುಂದುವರಿದಿತ್ತು.
ನದಿ ದಾಟಿ ಬಂತೇ?
ಬುಧವಾರ ಕಾಣಿಸಿಕೊಂಡ ಕಾಡುಕೋಣವು ಬೆಳಗ್ಗಿನಿಂದಲೇ ಅರಣ್ಯ ಇಲಾಖೆಯ ಸಿಬಂದಿಯನ್ನು ಸತಾಯಿಸುತ್ತಿತ್ತು. ಕೂಳೂರು ಪರಿಸರದ ಪ್ರದೇಶಗಳಲ್ಲಿ ಕಣ್ಣು ತಪ್ಪಿಸಿ ತಿರು ಗಾಡಿತ್ತು. ಕೂಳೂರು ಬಳಿ ಫಲ್ಗುಣಿ ನದಿಯಲ್ಲಿ ಈಜುತ್ತ ದಡಕ್ಕೆ ಬಂದಿರುವ ವೀಡಿಯೋವೊಂದು ವೈರಲ್ ಆಗಿದೆ.