Advertisement
“ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಉಗ್ರವಾದವನ್ನು ಬೇರುಮಟ್ಟದಲ್ಲಿ ಅಳಿಸಿ ಹಾಕುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ನಾನು ಅವರನ್ನು ದೂರದಿಂದ ನೋಡಿದ್ದೇನೆ. ಆ ಮನುಷ್ಯನ ಸಂಕಲ್ಪವನ್ನು ನಾನು ಮೆಚ್ಚುತ್ತೇನೆ. ಟ್ರಂಪ್‌ರನ್ನು ಮರು ಆಯ್ಕೆ ಮಾಡಬೇಕು’ ಎಂದು ಹೇಳಿದ್ದಾರೆ. ಉಗ್ರ ಒಸಾಮಾ ಬಿನ್ ಲಾಡೆನ್‌ಗಿಂತ ಭಿನ್ನ ಆಲೋಚನೆ, ಭಿನ್ನ ವ್ಯಕ್ತಿತ್ವ ಹೊಂದಿರುವ ನೂರ್ ಬಿನ್ ಇದೇ ಮೊದಲ ಬಾರಿಗೆ ಸಂದರ್ಶನದಲ್ಲಿ ಬಿಚ್ಚುಮಾತು ಗಳನ್ನಾಡಿದ್ದಾರೆ.
ವಾಷಿಂಗ್ಟನ್: “”ಅಮೆರಿಕದಲ್ಲಿ ಇಬ್ಬಗೆಯ ನೀತಿಯಿದೆ. ನ್ಯಾಯತೀರ್ಮಾನದಲ್ಲಿ ಬಿಳಿಯರನ್ನು ಒಂದು ರೀತಿಯಲ್ಲಿ ನಡೆಸಿಕೊಂಡರೆ, ಕಪ್ಪು ವರ್ಣೀಯರಿಗೆ ಬೇರೊಂದು ರೀತಿಯ ನ್ಯಾಯ ನೀಡಲಾಗುತ್ತದೆ” ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಆ ದೇಶದ ಉಪಾಧ್ಯಕ್ಷ ಹುದ್ದೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ. ಈ ಮೂಲಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ವಿರುದ್ಧ ವರ್ಣಭೇದ ನೀತಿಯ ಆರೋಪವನ್ನು ಮಾಡಿದ್ದಾರೆ. ಇತ್ತೀಚೆಗೆ, ಕಪ್ಪು ವರ್ಣೀಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಘಟನೆಗಳು ಜನರನ್ನು ರೊಚ್ಚಿಗೆಬ್ಬಿಸಿದ್ದವು. ಆದರೆ, ಟ್ರಂಪ್ ಸರ್ಕಾರ, ತಮ್ಮ ಆಡಳಿತದಲ್ಲಿ ವರ್ಣಭೇದ ನೀತಿಗೆ ಜಾಗವಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ, ಕಮಲಾ ಹ್ಯಾರಿಸ್ ಅವರು ಅಮೆರಿಕದಲ್ಲಿ ಇಬ್ಬಗೆಯ ನೀತಿಯಿದೆ ಎಂದು ಹೇಳಿದ್ದಾರೆ. ಇನ್ನು, ತಮ್ಮ ತಾಯಿ ಈಗ ಜೀವಂತವಾಗಿದ್ದರೆ, ಉಪಾಧ್ಯಕ್ಷರ ಪಟ್ಟಕ್ಕೆ ತಾವು ಅಭ್ಯರ್ಥಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದರು ಎಂದಿದ್ದಾರೆ.