ಸಿದ್ದಾಪುರ: ವ್ಯಕ್ತಿಯ ಕ್ರಿಯಾಶೀಲ ವ್ಯಕ್ತಿತ್ವವು ಜೀವನ ಶೈಲಿಯನ್ನು ಬದಲಾಯಿಸುತ್ತದೆ. ಸಂಘಟನೆಯ ಮೌಲ್ಯಾಧಾರಿತ ವಿದ್ಯಾಮಾನಗಳು ಸಮಾಜದ ಏಳಿಗೆಗೆ ಸಹಕಾರಿಯಾಗಲಿವೆ ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಬೆಳ್ವೆ ವಲಯದ ಅಧ್ಯಕ್ಷ ಬಿ. ಎಸ್. ಅನಂತಪದ್ಮನಾಭ ಬಾಯರಿ ಬೆಳ್ವೆ ಅವರು ಹೇಳಿದರು.
ಅವರು ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಕಮಲ ವಿಟuಲ ಸಭಾಭವನದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಬೆಳ್ವೆ ವಲಯದ ವಾರ್ಷಿಕ ಅಧಿವೇಶನ, ಪ್ರತಿಭಾ ಪುರಸ್ಕಾರ, ನೋಟ್ ಪುಸ್ತಕಗಳ ಉಚಿತ ವಿತರಣೆ, ಕಲಿಕಾ ಪ್ರೋತ್ಸಾಹ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಟಿ.ಕೆ. ಮಹಾಬಲೇಶ್ವರ ಭಟ್, ಮಹಿಳಾ ಅಧ್ಯಕ್ಷೆ ಪ್ರಪುಲ್ಲಾ ಎನ್. ಭಟ್, ಬೆಳ್ವೆ ವಲಯದ ಗೌರವಾಧ್ಯಕ್ಷ ಕೆ. ಅನಂತ ತಂತ್ರಿ, ಮಹಿಳಾ ಅಧ್ಯಕ್ಷೆ ಪದ್ಮಾ ಹಾಲಂಬಿ ಬೆಳ್ವೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ದೇವತಾ ಪ್ರಾರ್ಥನೆ, ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆ ಹಾಗೂ ವಿವಿಧ ಸ್ಪಧೆìಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ವೃಷಾಂಕ ಭಟ್ ಬೆಳ್ವೆ ಮತ್ತು ಪಿಯುಸಿ ವಿಭಾಗದ ಸುಬ್ರಹ್ಮಣ್ಯ ಬಾಯರಿ ಬೆಳ್ವೆ ಅವರಿಗೆ ಪ್ರತಿಭಾ ಪುರಸ್ಕಾರ, ಬೆಳ್ವೆ ಅಬ್ಲಿಕಟ್ಟೆ ಚಂದ್ರಶೇಖರ್ ಹೆಬ್ಟಾರ ಅವರ ಪತ್ನಿ ದಿ| ವಸಂತಿ ಹೆಬ್ಟಾರ ಇವರ ಸ್ಮರಣಾರ್ಥ ಕಲಿಕಾ ಪ್ರೋತ್ಸಾಹ ವಿತರಣೆ, ಪಿಯುಸಿ ವಿಭಾಗದಲ್ಲಿ ವರುಣ್ ಬಾಯರಿ ಶೇಡಿಮನೆ, ಅರ್ಪಿತಾ ಮಯ್ಯ ಬೆಳ್ವೆ, ಎಸ್.ಎಸ್.ಎಲ್.ಸಿ.ಯಲ್ಲಿ ಅಪೂರ್ವಾ ಬಾಯರಿ ಬೆಳ್ವೆ ಅವರಿಗೆ ಕಲಿಕಾ ಪ್ರೋತ್ಸಾಹ ವಿತರಿಸಲಾಯಿತು. ಉಡುಪಿ ಪಂಚಮಿ ಟ್ರಸ್ಟ್ ಮತ್ತು ಉಡುಪಿ ಗಾಂಧಿ ಆಸ್ಪತ್ರೆ ಮೆಡಿಕಲ್ ಡೈರೆಕ್ಟರ್ ಡಾ| ಹರೀಶ್ಚಂದ್ರ ಅವರ ಪ್ರಾಯೋಜಕತ್ವದಲ್ಲಿ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶೇಡಿಮನೆ ಚೇರ್ಕಳ ನಾಗರಾಜ ನಕ್ಷತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರವಿಚಂದ್ರ ಕಾರಂತ ವರದಿ ಸಲ್ಲಿಸಿದರು. ಖಜಾಂಚಿ ಸತ್ಯನಾರಾಯಣ ಹೆಬ್ಟಾರ್ ಆಯಾ ವ್ಯಯ ಪಟ್ಟಿ ಮಂಡಿಸಿದರು. ಸತ್ಯನಾರಾಯಣ ಹೆಬ್ಟಾರ್ ಮರೂರು ವಂದಿಸಿದರು.