Advertisement

ಪದ್ಮಶಾಲಿ ಸಮಾಜ ಸೇವಾ ಸಂಘದಿಂದ ವಾರ್ಷಿಕ ಪೂಜೋತ್ಸವ ಮತ್ತು ಧಾರ್ಮಿಕ ಸಭೆ

05:08 PM Jun 06, 2019 | Vishnu Das |

ಮುಂಬಯಿ: ಸಮಾಜದ ಏಳ್ಗೆಗಾಗಿ ಕೆಲಸ ಮಾಡುತ್ತಿರುವ ಪದ್ಮಶಾಲಿ ಸಮಾಜ ಸೇವಾ ಸಂಘವು ನಮಗೆ ಮುಂಬಯಿಯಲ್ಲಿ ಒಂದು ದೇವಾಲಯವಿದ್ದಂತೆ. ಇಲ್ಲಿಗೆ ಬರುವುದರಿಂದ ನಮ್ಮ ಸಮಾಜದ ಹದಿನಾರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಂತಾಗುತ್ತದೆ. ಇಲ್ಲಿ ಎಲ್ಲರೂ ಒಂದಾಗಿ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಸಮಾಜದಲ್ಲಿ ಅನೇಕ ಹಿರಿಯರ ಪರಿಶ್ರಮದ ಫಲವಾಗಿ ಇಂದು ಸುಂದರವಾದ ಕಲಾಭವನ ನಿರ್ಮಾಣಗೊಂಡು ಸಮಾಜಕ್ಕೆ ಅರ್ಪಣೆಗೊಂಡಿದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು ಎಂದು ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಉತ್ತಮ್‌ ಶೆಟ್ಟಿಗಾರ್‌ ಅವರು ನುಡಿದರು.

Advertisement

ಜೂ. 2ರಂದು ಘೋಡ್‌ಬಂದರ್‌ರೋಡ್‌, ವಾಗಿºಲ್‌ರೋಡ್‌, ಪದ್ಮಶಾಲಿ ಕಲಾ ಭವನದ ಮಂಜುನಾಥ ಸಭಾಗೃಹದಲ್ಲಿ ನಡೆದ ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ 23ನೇ ವಾರ್ಷಿಕ ಶ್ರೀ ವೀರಭದ್ರ ಮಹಾಮ್ಮಾಯಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸಮಾಜಪರ ಯೋಜನೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಯುವ ಜನತೆಯನ್ನು ಸಮಾಜಪರ ಕಾರ್ಯಕ್ರಮಗಳತ್ತ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇಂದಿನ ಕಾರ್ಯಕ್ರಮದಲ್ಲಿ ಊರಿನ ನಮ್ಮ ಸಮಾಜದ ಹದಿನಾರು ಧಾರ್ಮಿಕ ಕ್ಷೇತ್ರಗಳ ಗುರಿಕಾರರು ಭಾಗವಹಿಸುವುದರೊಂದಿಗೆ ಪದ್ಮಶಾಲಿ ಕಲಾಭವನವು ಪುಣ್ಯಭೂಮಿಯಾಗಿ ಇಂದು ಕಂಗೊಳಿಸುತ್ತಿದೆ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದು ಶುಭಹಾರೈಸಿದರು.

ಹರ್ಷ್‌ ಫೌಂಡೇಷನ್‌ ಮುಂಬಯಿ ಇದರ ಕೃಷ್ಣಾನಂದ ಎಂ. ಶೆಟ್ಟಿಗಾರ್‌ ಇವರ ಸೇವಾರ್ಥಕವಾಗಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಕೃಷ್ಣಾನಂದ ಎಂ. ಶೆಟ್ಟಿಗಾರ್‌ ಅವರು, ನಾವು ಶಿಕ್ಷಣಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಸಮಾಜದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಮುಂದೆ ಆದರ್ಶ ನಾಗರಿಕರಾಗಬೇಕು ಎಂಬ ಆಶಯ ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಾವು ಸದಾ ಶ್ರಮಿಸುತ್ತಿದ್ದೇವೆ. ಸಂಸ್ಥೆಯು ಶೈಕ್ಷಣಿಕವಾಗಿ ನೀಡುತ್ತಿರುವ ಸಹಾಯವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಇದನ್ನು ಪಡೆಯಲು ಕೀಳರಿಮೆ ಸಲ್ಲದೆ ಎಂದರು.

ಸಂಘದ ದಾನಿ ಶಿವಾನಂದ ಶೆಟ್ಟಿಗಾರ್‌ ದಂಪತಿ, ಹಿರಿಯ ಸದಸ್ಯ, ಮಾಜಿ ಅಧ್ಯಕ್ಷ ದಯಾನಂದ ಶೆಟ್ಟಿಗಾರ್‌ ಹಾಗೂ ಕಲಾಭವನಕ್ಕೆ ದೇವರ ಮಂಟಪವನ್ನು ನಿರ್ಮಿಸಿದ ಅಶೋಕ್‌ ಕೊಡ್ಯಡ್ಕ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಶಿವಾನಂದ ಶೆಟ್ಟಿಗಾರ್‌ ಅವರು ಮಾತನಾಡಿ, ಸಂಘ-ಸಂಸ್ಥೆಗಳು ಬೆಳೆಯಬೇಕಾದರೆ ದಾನಿಗಳ ಸಹಕಾರ ಅಗತ್ಯವಿದೆ. ಪದ್ಮಶಾಲಿ ಸಮಾಜ ಸೇವಾ ಸಂಘಕ್ಕೆ ಅನೇಕ ಮಹಾನೀಯರು ಧನ ಸಹಾಯ ನೀಡಿದ್ದು, ಇನ್ನೂ ನಮ್ಮ ಸಮಾಜದಲ್ಲಿ ಅನೇಕ ದಾನಿಗಳಿದ್ದಾರೆ. ಎಲ್ಲರು ಒಂದಾಗಿ ಕಿಂಚಿತ್ತು ಸೇವೆ ನೀಡಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಉತ್ತಮ್‌ ಶೆಟ್ಟಿಗಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಊರಿನ ಹದಿನಾರು ಶ್ರೀ ವೀರಭದ್ರ ದೇವಸ್ಥಾನಗಳ ಪ್ರಮುಖರಾದ ಪುರುಷೋತ್ತಮ ಶೆಟ್ಟಿಗಾರ್‌ ಬಾಕೂìರು, ಬಾಲಕೃಷ್ಣ ಎಂ. ಶೆಟ್ಟಿಗಾರ್‌ ಸಾಲಿಕೇರಿ, ಶ್ರೀ ಜ್ಯೋತಿಷ್ಯ ಪ್ರಸಾದ್‌ ಶೆಟ್ಟಿಗಾರ್‌ ಕಲ್ಯಾಣ್‌ಪುರ, ಪ್ರಭಾಶಂಕರ್‌ ಪದ್ಮಶಾಲಿ ಕಿನ್ನಿಗೋಳಿ, ಕೆ. ಜನಾರ್ಧನ ಶೆಟ್ಟಿಗಾರ್‌ ಕಾರ್ಕಳ, ಈಶ್ವನ ಎನ್‌. ಶೆಟ್ಟಿಗಾರ್‌ ಕಾಪು, ರಾಮ ಶೆಟ್ಟಿಗಾರ್‌ ಎರ್ಮಾಳ್‌, ನಾಮದೇವ್‌ ಕನ್ಹಂಗಾಡ್‌, ದಾಮೋದರ ಪದ್ಮಶಾಲಿ ಬೋಳೂರು, ಗಂಗಾಧರ ಗುರಿಕಾರ ಸಿದ್ಧಕಟ್ಟೆ, ಆನಂದ ಗುರಿಕಾರ ಸುರತ್ಕಲ್‌, ರತ್ನಾಕರ ಗುರಿಕಾರ ಕಲ್ಲಾಪು, ಪುರಂದರ ಡಿ. ಶೆಟ್ಟಿಗಾರ್‌ ಮುಲ್ಕಿ, ಸುಂದರ ಶೆಟ್ಟಿಗಾರ ಪಡುಬಿದ್ರೆ, ಐತಪ್ಪ ಶೆಟ್ಟಿಗಾರ್‌ ಉಳ್ಳಾಲ, ಲಕ್ಷ¾ಣ್‌ ಶೆಟ್ಟಿಗಾರ್‌ ಮಂಜೇಶ್ವರ, ವಾಸುದೇವ ಗುರಿಕಾರ ಅವರು ಉಪಸ್ಥಿತರಿದ್ದರು.

Advertisement

ಈ ಸಂದರ್ಭ ಕೋಟೇಶ್ವರದ ವಾಸ್ತುತಜ್ಞ, ಸಾಹಿತಿ, ಜ್ಯೋತಿಷ ಚೂಡಾಮಣಿ ಕೆ. ಬಸವರಾಜ ಶೆಟ್ಟಿಗಾರ್‌ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಪ್ರಧಾನ ಲೀಲಾಧರ ಬಿ. ಶೆಟ್ಟಿಗಾರ್‌ ನಿರ್ವಹಿಸಿದರು. ಪದ್ಮಶಾಲಿ ಎಜುಕೇಶನ್‌ ಸೊಸೈಟಿಯ ಕಾರ್ಯದರ್ಶಿ ರಮೇಶ್‌ ಪಿ. ಶೆಟ್ಟಿಗಾರ್‌ ವಂದಿಸಿದರು. ಪದ್ಮಶಾಲಿ ಸಮಾಜ ಸೇವಾ ಸಂಘ, ಪದ್ಮಶಾಲಿ ಎಜುಕೇಶನ್‌ ಸೊಸೈಟಿ, ಪದ್ಮಶಾಲಿ ಮಹಿಳಾ ಬಳಗ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಕಾರ್ತಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಧಾರ್ಮಿಕ ಕಾರ್ಯಕ್ರಮವಾಗಿ ಪೂರ್ವಾಹ್ನ 9 ರಿಂದ ಶ್ರೀ ವೀರಭದ್ರ ಮಹಾಮ್ಮಾಯಿ ಪೂಜೆ, ಪೂರ್ವಾಹ್ನ 11ರಿಂದ ತೀರ್ಥ ಪ್ರಸಾದ ವಿತರಣೆ, ಭಜನಾ ಕಾರ್ಯಕ್ರಮ, ಮಧ್ಯಾಹ್ನ 12ರಿಂದ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು. ಸಮಾಜ ಬಾಂಧವರು, ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅನ್ನಪ್ರಸಾದವನ್ನು ಸ್ವೀಕರಿಸಿದರು.

ಚಿತ್ರ-ವರದಿ : ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next