Advertisement

ಅಷ್ಟಬಂಧ ಸಹಿತ ಪುನರ್‌ ಪ್ರತಿಷ್ಠಾಪನೆ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ

07:35 PM Jan 12, 2021 | Team Udayavani |

ಮುಂಬಯಿ, ಜ. 11: ಮಲಾಡ್‌ ಪೂರ್ವ ಲಕ್ಷ್ಮಣ ನಗರದ ಶ್ರೀ ಮಹಾತೋಭಾರ ಶನೀಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಸಹಿತ ಪುನರ್‌ ಪ್ರತಿಷ್ಠಾಪನೆ ಹಾಗೂ 47ನೇ ವಾರ್ಷಿಕ ಜಾತ್ರಾಮಹೋತ್ಸವವು ಜ. 4ರಿಂದ ಜ. 7ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಜ. 4ರಂದು ಬೆಳಗ್ಗೆಯಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪಂಚಗವ್ಯ ಶುದ್ಧಿ, ತೋರಣ ಮುಹೂರ್ತ, ಮಹಾಗಣಪತಿ ಹವನ, ಸುಕೃತ ಹೋಮ, ವಿಷ್ಣು ಸಹಸ್ರನಾಮ ಹೋಮ, ವಾಸ್ತು ಬಲಿ, ದಿಕ್ಪಾಲ ಬಲಿ, ವಾಸ್ತು ರಾಕ್ತೋಘ್ನ, ಸುದರ್ಶನ ಹೋಮ ಜರಗಿತು. ಜ. 5ರಂದು ಬೆಳಗ್ಗೆಯಿಂದ ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹವನ, ಅಥರ್ವ ಶೀರ್ಷ ಹವನ, ಅಶ್ಲೇಷಾ ಬಲಿ, ಮೃತ್ಯುಂಜಯ ಹವನ, ಸಂಜೆಯಿಂದ ಭೂವರಾಹ ಹವನ, ದುರ್ಗಾ ಹವನ, ಶ್ರೀ ಮಹಾಗಣಪತಿ, ಶ್ರೀ ದುರ್ಗಾ ಪರಮೇಶ್ವರಿ ಶ್ರೀ ಈಶ್ವರ ಹಾಗೂ ಶ್ರೀ ಶನೀಶ್ವರ ದೇವರ ಬಿಂಬಾಧಿವಾಸ ಮತ್ತು ಹವನ ಜರಗಿತು.

ಜ. 6ರಂದು ಬೆಳಗ್ಗೆಯಿಂದ ಪ್ರತಿಷ್ಠಾ ಹೋಮಾದಿಗಳು, ಗ್ರಹಶಾಂತಿ ಹೋಮ, ಮೀನ ಸುಮೂರ್ತದಲ್ಲಿ ಪರಿವಾರ ದೇವತಾ ಸಮೇತ ಶ್ರೀ ಮಹತೋಭಾರ ಶನಿದೇವರ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಸಂಜೆ ತ್ರಿಷ್ಟಪು ಮಂತ್ರದಿಂದ ಹವನ, ಶ್ರೀ ಸತ್ಯನಾರಾಯಣ ಮಹಾಪೂಜೆ, ರಂಗಪೂಜೆ ಮತ್ತು ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.

ಕೊನೆಯ ದಿನವಾದ ಜ. 7ರಂದು ಸಾರ್ವಜನಿಕ ಶನಿಪೂಜೆ, ದನದ ಹಾಲು ಹಾಗೂ ಸೀಯಾಳ ಇತ್ಯಾದಿಗಳಿಂದ ಶ್ರೀ ಶನಿದೇವರಿಗೆ ಅಭಿಷೇಕ ಮಾಡಲಾಯಿತು. ಎಲ್ಲ ಧಾರ್ಮಿಕ ಕಾರ್ಯಗಳು ವೇ| ಮೂ| ರಾಘವೇಂದ್ರ ತುಂಗಾ ಭಟ್‌ ಇವರ ಪೌರೋಹಿತ್ಯದಲ್ಲಿ ಜರಗಿತು. ಈ ಸಂಧರ್ಭ ಅಭ್ಯುದಯ ಬ್ಯಾಂಕಿನ ಎಂ. ಡಿ. ಪ್ರೇಮನಾಥ್‌ ಸಾಲ್ಯಾನ್‌, ಸ್ಥಳೀಯ ನಗರ ಸೇವಕರನ್ನು, ಸಮಾಜ ಸೇವಕರು, ಹಿತೈಷಿಗಳು ಹಾಗೂ ದಾನಿಗಳನ್ನು ಸಮ್ಮಾನಿಸಲಾಯಿತು.

ಇದನ್ನೂ ಓದಿ:ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವು

Advertisement

ಪೂಜೆಯ ಯಜಮಾನಿಕೆಯನ್ನು ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ದಂಪತಿ ವಯಿಸಿದ್ದು ಸಮಿತಿಯ ಇತರ ಪದಾ ಕಾರಿಗಳು ಹಾಗೂ ಸದಸ್ಯರುಗಳು ವಿವಿಧ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ದೇವಸ್ಥಾನದ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಎಸ್‌. ಶೆಟ್ಟಿ. ಗೌರವ ಕೋಶಾಧಿಕಾರಿ ಹರೀಶ್‌ ಜೆ. ಸಾಲ್ಯಾನ್‌, ಜತೆ ಕಾರ್ಯದರ್ಶಿಗಳಾದ ನಿತ್ಯಾನಂದ ಎಲ್‌. ಕೋಟ್ಯಾನ್‌, ಶಾಲಿನಿ ಶೆಟ್ಟಿ, ಜತೆ ಕೊಶಾಧಿಕಾರಿಗಳಾದ ಚಂದ್ರಕುಮಾರ್‌ ಶೆಟ್ಟಿ, ಶಿವಾನಂದ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್‌ ಎನ್‌. ಕೋಟ್ಯಾನ್‌, ಅರ್ಚಕ ನಾರಾಯಣ ಭಟ್‌, ಸಲಹೆಗಾರರಾದ ಶ್ರೀಧರ ಆರ್‌. ಶೆಟ್ಟಿ, ಎ. ಕೆ. ದೇವಾಡಿಗ, ರಮೇಶ್‌ ಎಚ್‌. ರಾವ್‌ ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ಶೆಟ್ಟಿ, ಬಾಬು ಎನ್‌ ಚಂದನ್‌, ಪ್ರಭಾಕರ ಶೆಟ್ಟಿ, ದಿನೇಶ್‌ ಕುಂಬ್ಳೆ, ಸದಾನಂದ ನಾಯಕ್‌ ರಾಮಕೃಷ್ಣ ಶೆಟ್ಟಿಯಾನ್‌, ಸದಾನಂದ ಶೆಟ್ಟಿ, ಸುರೇಶ್‌ ಸಾಲ್ಯಾನ್‌, ಮಹಿಳಾ ವಿಭಾಗದ ಜಯಂತಿ ಸಾಲ್ಯಾನ್‌, ರಾಜಶ್ರೀ ಪೂಜಾರಿ, ಶಾಲಿನಿ ಶೆಟ್ಟಿ, ಜಯಲಕ್ಷ್ಮೀ ನಾಯಕ್‌, ಯಶೋದಾ ರೈ, ಗಿರಿಜಾ ಮರಕಲ, ಯಶೋದಾ ಕುಂಬ್ಳೆ, ಭವಾನಿ ಕುಂದರ್‌, ಲತಾ ಪೂಜಾರಿ, ಸುರೇಖಾ ಶೆಟ್ಟಿಯಾನ್‌, ಸ್ನೇಹಲತಾ ನಾಯಕ್‌ ಹಾಗೂ ಸ್ಥಳೀಯ ತುಳು-ಕನ್ನಡಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next