ಮುಂಬಯಿ, ಸೆ. 5: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ವಾರ್ಷಿಕ ಮಹಾಸಭೆ ಸೆ. 5ರಂದು ಮಧ್ಯಾಹ್ನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಿತು.
ಗಣ್ಯರು ದೀಪ ಪ್ರಜ್ವಲಿಸಿ ಮಹಾಸಭೆ ಯನ್ನು ಉದ್ಘಾಟಿಸಿದರು.ಈಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,ಕೋಶಾಧಿಕಾರಿ ಉಳೂ¤ರು ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಸತೀಶ್ ಅಡಪ್ಪ, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಬಂಟರ ಸಂಘ ಮುಂಬಯಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಹಾಗೂ ಪದಾಧಿಕಾರಿಗಳು, ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಬಂಟರ ಸಂಘದ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರು ಭಾಗವಹಿಸಿದ್ದರು. ಅಪರಾಹ್ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಬಹಿರಂಗ ಅಧಿವೇಶನವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಜರಗಿತು.
ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಹಿರಿಯ ಉದ್ಯಮಿ, ಬಂಟ ಸಮಾಜದ ಮಹಾದಾನಿ ಎಸ್.ಎಂ.ಗ್ರೂಪ್ ನ ಎಸ್. ಎಂ. ಶೆಟ್ಟಿ, ಮುಖ್ಯ ಅತಿಥಿಯಾಗಿ ಆರ್ಗಾನಿಕ್ ಕೆಮಿಕಲ್ಸ್‌ನ ತೋನ್ಸೆ ಆನಂದ ಶೆಟ್ಟಿ, ಗೌರವ ಅತಿಥಿಗಳಾಗಿ ಒಕ್ಕೂಟದ ನಿರ್ದೇಶಕರಾದ ಭವಾನಿ ಶಿಪ್ಪಿಂಗ್‌ನ ಕೆ. ಡಿ. ಶೆಟ್ಟಿ, ಎಂಆರ್‌ಜಿ ಗ್ರೂಪ್‌ನ ಪ್ರಕಾಶ್ ಶೆಟ್ಟಿ, ವಿಕೆ ಗ್ರೂಪ್‌ನ ಕೆ. ಎಂ. ಶೆಟ್ಟಿ, ಅತಿಥಿಗಳಾಗಿ
ಒಕ್ಕೂಟದಮಹಾಪೋಷಕರಾದ ಶಶಿಕಿರಣ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಮಿಸ್ ರೇಖಾ ಜೆ. ಶೆಟ್ಟಿ, ಡಾ| ಶಂಕರ್ ಶೆಟ್ಟಿ ವಿರಾರ್, ಸದಾಶಿವ ಶೆಟ್ಟಿ ಹೇರಂಬಾ ಗ್ರೂಪ್, ಆರ್. ಕೆ. ಶೆಟ್ಟಿ ಹೇರಂಬಾ ಗ್ರೂಪ್, ಶಶಿಧರ ಶೆಟ್ಟಿ ಬರೋಡ, ಒಕ್ಕೂಟದ ಮಹಾಪೋಷಕರು, ಪೋಷಕರು ಹಾಗೂ ವಿವಿಧ ಭಾಗಗಳ ಬಂಟ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನಡೆದ ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಬಂಟರ ಸಂಘದ 9 ಪ್ರಾದೇಶಿಕ ಸಮಿತಿ ಗಳಾದ ನವಿಮುಂಬಯಿ, ಜೋಗೇಶ್ವರಿ- ದಹಿಸರ್, ಅಂಧೇರಿ -ಬಾಂದ್ರಾ, ಮೀರಾ-ಭಾಯಂದರ್, ವಸಾಯಿ -ಡಹಾಣೂ, ಡೊಂಬಿವಲಿ, ಭಿವಂಡಿ-ಬದ್ಲಾಪುರ, ಸಿಟಿ ಪ್ರಾದೇಶಿಕ ಸಮಿತಿ, ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಗಳಲ್ಲದೆಥಾಣೆಬಂಟ್ಸ್,ಮುಲುಂಡ್ ಬಂಟ್ಸ್, ಮೀರಾ-ಡಹಾಣೂ ಬಂಟ್ಸ್, ಬಂಟ್ಸ್ ಫೋರಂ ಮೀರಾ-ಭಾಯಂದರ್ ತಂಡಗಳು ಭಾಗವಹಿಸಿದ್ದವು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಪ್ರಾಯೋಜಕರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ನೃತ್ಯ ಕಾರ್ಯಕ್ರಮದ ಬಳಿಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಂದ ಗಾನಾಂಜಲಿ ಕಾರ್ಯ ಕ್ರಮ ನಡೆಯಿತು. ಗಣ್ಯರ ಸಮ್ಮುಖದಲ್ಲಿ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ,ತೃತೀಯಹಾಗೂಸಮಾಧಾನಕರ ಬಹುಮಾನನೀಡಲಾಯಿತು.
ಚಿತ್ರ-ವರದಿ:
ಪ್ರೇಮನಾಥ್‌ಮುಂಡ್ಕೂರು.