Advertisement
ತಾಲೂಕು ಮಾಕೋಡು ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಘಟನೆ ಜರುಗಿತು.ಸಭೆ ಆರಂಭವಾಗುತ್ತಿದ್ದಂತೆ ವಾರ್ಷಿಕ ವರದಿಯನ್ನು ಓದಲು ಮುಂದಾದ ಅಧ್ಯಕ್ಷ ಮಹಾಲಿಂಗಪ್ಪ ಸಭಾ ನಡಾವಳಿಯನ್ನು ಮಂಡಿಸಲು ಮುಂದಾದರು.ಈ ವೇಳೆ ವಕೀಲ ಹಾಗೂ ಗ್ರಾಮದ ಮುಖಂಡ ಎಂ.ಜಿ.ಘೋರ್ಪಡೆ ಪಾಟೀಲ ಶೇರೇಗಾರ್ ಮಾತನಾಡಿ, ಸಂಘದಲ್ಲಿ 1400 ಶೇರುದಾರಿದ್ದು ಆಡಳಿತ ಮಂಡಳಿಯವರು ಶೇರುದಾರರಿಗೆ ಸರಿಯಾದ ಮಾಹಿತಿ ಹಾಗೂ ಆಹ್ವಾನ ಪತ್ರಿಕೆ ನೀಡಲು ವಿಫಲರಾಗಿದ್ದಾರೆ ಸಂಘದ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಸಭೆಯ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿ, ಸಹಕಾರ ಸಂಘದಲ ರೈತರು ಯಾವುದೇ ಮಾಹಿತಿ ಕೇಳಿದರೂ ಆಡಳಿತ ಮಂಡಳಿಯವರು ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ, ಆಡಳಿತ ಮಂಡಳಿಯವರು ತಾವು ಮಾಡಿರುವ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿಯನ್ನು ಯಾವುದೇ ದೂರು ಇಲ್ಲದಿದ್ದರೂ ಅಮಾನತು ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವುದಲ್ಲದೆ ಕಾನೂನಿಗೆ ವಿರುದ್ಧವಾಗಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ನೇಮಕ ಮಾಡಿಕೊಂಡು ಸುಳ್ಳು ಲೆಕ್ಕ ನೀಡುವ ಮೂಲಕ ಸಂಘದ ಸರ್ವ ಸದಸ್ಯರಿಗೆ ಸುಳ್ಳು ವರದಿ ನೀಡಲು ಮುಂದಾಗಿರುವ ಕಾರಣ ಸಭೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
Related Articles
Advertisement
11ಗಂಟೆಗೆ ಆರಂಭವಾದ ಸಭೆ 3ಗಂಟೆ ಕಾದರೂ ಯಾವುದೇ ರೀತಿಯ ಸಭೆ ನಡೆಸಲು ಆಡಳಿತ ಮಂಡಳಿಯು ಸದಸ್ಯರನ್ನು ಮನವೊಲಿಸಿದರು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾದೆ ಸಭೆ ರದ್ದಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹಲಿಂಗಪ್ಪ, ಉಪಾಧ್ಯಕ್ಷ ಬಸವರಾಜ್, ಸದಸ್ಯ ಹಾಗೂ ಮಾಜಿ ತಾ.ಪಂ ಅಧ್ಯಕ್ಷ ಸ್ವಾಮಿಗೌಡ, ರಾಜೇಗೌಡ, ಸಣ್ಣಯ್ಯ, ದೊಡ್ಡೇಗೌಡ, ಮಂಡೀಗೌಡ, ಸಣ್ಣೇಗೌಡ, ನಾಗರತ್ನ, ಮಣಿಯಮ್ಮ, ಗೌರಮ್ಮ, ಹಾಗೂ ಪ್ರಭಾರಿ ಮುಖ್ಯೋಪಾದ್ಯಾಯ ಲಿಂಗರಾಜು, ಮುಖಂಡರುಗಳಾದ ಎಂ.ಕೆ.ಕೃಷ್ಣಗೌಡ, ಸುರೇಶ್, ವಕೀಲ ಘೋರ್ಪಡೆ ಪಾಟೀಲ್, ನೀಲಕಂಠ, ಎಂ.ಕೆ.ಸುರೇಶ್‌ಕುಮಾರ್, ಸೋಮಣ್ಣ, ಬಸವರಾಜು, ನಿಂಗರಾಜು, ಲೋಕೇಶ್, ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.