ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ವರ್ಧಂತ್ಯುತ್ಸವ ಹಾಗೂ ಸಪ್ತರಾತ್ರೋತ್ಸವ ಸಡಗರದಿಂದ ಜರುಗಿತು. ಕೊನೆ ದಿನವಾದ ಶನಿವಾರ ಬೆಳಗ್ಗೆ ರಾಯರ ಮೂಲಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ಬಳಿಕ ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾದ ಶೇಷವಸ್ತ್ರಗಳನ್ನು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರು.
ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ಶ್ರೀಲಂಕಾದಿಂದ “ಸೀತಾ ಎಲಿಯಾ” ಶಿಲೆ ಉಡುಗೊರೆ
ಸಕಲ ವಾದ್ಯ ಮೇಳದೊಂದಿಗೆ ಮಠದ ಪ್ರಾಕಾರದಲ್ಲಿ ಶ್ರೀಗಳು ತಲೆ ಮೇಲೆ ಹೊತ್ತುಕೊಂಡು ಹೋಗಿ ಮೆರವಣಿಗೆ ಮೂಲಕ ರಾಯರಿಗೆ ಸಮರ್ಪಿಸಿದರು.
ಮೂಲರಾಮದೇವರಿಗೆ ಸಂಸ್ಥಾನ ಪೂಜೆ ಜರುಗಿತು. ಬಳಿಕ ಮಠದ ಪ್ರಾಂಗಣದಲ್ಲಿ ರಥೋತ್ಸವ ಜರುಗಿಸಲಾಯಿತು.
ಇದನ್ನೂ ಓದಿ: ಹರಿದ ಜೀನ್ಸ್ ಹೇಳಿಕೆಗೆ ಆಕ್ರೋಶ : ಕ್ಷಮೆ ಕೋರಿದ ಸಿಎಂ ತಿರತ್ ಸಿಂಗ್ ರಾವತ್