Advertisement
ಸಂಜೆ ನಡೆ ತೆರೆದ ಬಳಿಕ ದೀಪಾ ರಾಧನೆ, ಸೀಮೆಯ ಭಕ್ತವೃಂದದ ವರಿಂದ ವಿಶ್ವರೂಪ ದರ್ಶನ ನಡೆ ಯಿತು. ರಾತ್ರಿ ಸಣ್ಣ ದೀಪೋತ್ಸವ, ಶ್ರೀಬಲಿ, ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೂರ್ಯ ಸಂಗೀತ ಬಳಗ ಯುವಪ್ರತಿಭೆ ಬಾಲಗಾಯಕಿ ಸೂರ್ಯ ಗಾಯತ್ರಿ ಅವರಿಂದ ಭಕ್ತಿ ಸಂಗೀತ ರಂಜಿಸಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಲ್ಪಾಡಿ ಕೂಟ ಮಹಾಜಗತ್ತು ಮಹಿಳಾ ವೇದಿಕೆಯ ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ ಮತ್ತು ಕಟೀಲು ಮೇಳದಿಂದ “ಶ್ರೀ ಕಟೀಲು ಕ್ಷೇತ್ರ ಮಹಾತೆ¾’ ಯಕ್ಷಗಾನ ಬಯಲಾಟ ಜರಗಿತು. ಜ. 17ರಂದು ರಾತ್ರಿ 9.45ರಿಂದ ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿಯ ಸಿಡಿಮದ್ದು ಪ್ರದರ್ಶನ ನಡೆಯಲಿದೆ.