Advertisement

ಕುಟುಂಬ ಅಭಿವೃದ್ಧಿ ಯೋಜನೆಯ ಫಲಾನುಭವಿಗಳ ವಾರ್ಷಿಕ ಸಮ್ಮೇಳನ

02:50 AM Jul 19, 2017 | Team Udayavani |

ಬೆಳ್ತಂಗಡಿ: ಸಮಾಜವು ಅಭಿವೃದ್ಧಿಯಾಗಬೇಕಾದರೆ ಮೊದಲು ಕುಟುಂಬದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಬೇಕು. ಆ ಮೂಲಕ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಡಿಕೆಆರ್‌ಡಿಎಸ್‌ ಸಂಸ್ಥೆಯ ನಿರ್ದೇಶಕ ಫಾ| ಜೋಸ್‌ ಆಯಾಂಕುಡಿ ಹೇಳಿದರು.

Advertisement

ಅವರು ಬೆಳ್ತಂಗಡಿಯ ಸಾನ್‌ತೋಮ್‌ ಟವರ್‌ನಲ್ಲಿ ಏರ್ಪಡಿಸಿದ್ದ ಕುಟುಂಬ ಅಭಿವೃದ್ಧಿ ಯೋಜನೆಯ ಫಲಾನುಭವಿಗಳ ವಾರ್ಷಿಕ ಸಮ್ಮೇಳನ , ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸೇವ್‌ ಎ ಫ್ಯಾಮಿಲಿ ಪ್ಲಾನ್‌ ಇಂಡಿಯಾ ಸಂಸ್ಥೆಯ ಟೀಮ್‌ ಲೀಡರ್‌ ಜೋನ್‌ ಸಿರಿಲ್‌ ಕಾರ್ಯಕ್ರಮ ಉದ್ಘಾಟಿಸಿದರು. ತರಬೇತಿದಾರರಾಗಿ ಅಜಿಶ್‌ ಕುಟುಂಬ ಅಭಿವೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಸಂಯೋಜಕ ಸುನಿಲ್‌ ಗೊನ್ಸಾಲ್ವಿಸ್‌ ಕಾರ್ಯಕ್ರಮ ನಿರ್ವಹಿಸಿದರು. ಪುದುವೆಟ್ಟಿನ ಫಲಾನುಭವಿ ವರ್ಗೀಸ್‌ ಕಳಪ್ಪುರಕ್ಕೆಲ್‌ ವಂದಿಸಿದರು. ಉಜಿರೆಯ ಫಲಾನುಭವಿ ಸಿಂಧೂ ಮ್ಯಾಥ್ಯೂ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next