Advertisement

ಕೆರೆಗಳಿಗೆ ನೀರುಣಿಸುವ ಯೋಜನೆ ಪ್ರಕಟ: ವಿಜಯೋತ್ಸವ

08:32 AM Feb 11, 2019 | Team Udayavani |

ಕೊಟ್ಟೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕೊಟ್ಟೂರು ಕೆರೆ ಸೇರಿದಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ 12 ಕೆರೆಗಳಿಗೆ ನೀರುಣಿಸುವ 85 ಕೋಟಿ ರೂ. ವೆಚ್ಚದ ಯೋಜನೆ ಪ್ರಕಟಿಸಿದ್ದನ್ನು ಸ್ವಾಗತಿಸಿ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಬೈಕ್‌ ರ್ಯಾಲಿ ಮೂಲಕ ವಿಜಯೋತ್ಸವ ಆಚರಿಸಿದರು.

Advertisement

ಬೀದಿ ಬದಿಯ ವ್ಯಾಪಾರ ಮಾಡುವ ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್‌ ವಿತರಿಸಿ ಮಾತನಾಡಿದ ಎಸ್‌. ಭಿಮಾನಾಯ್ಕ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೀದಿ ಬದಿಯ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಮಂಜೂರು ಮಾಡಲು ಸಹಕಾರಿ ಬ್ಯಾಂಕ್‌ಗಳಿಗೆ ಸೂಚಿಸಿದ್ದರು. ಅದರಂತೆ ಪಟ್ಟಣದ ಬಿಡಿಸಿಸಿ ಬ್ಯಾಂಕ್‌ ಬೀದಿ ಬದಿಯ ಅರ್ಹ ವ್ಯಾಪಾರಿಗಳಿಗೆ ಕಳೆದ 2 ತಿಂಗಳಲ್ಲಿ 125 ಫಲಾನುಭವಿಗಳಿಗೆ ಬಡ್ಡಿ ರಹಿತ 2,000ರಿಂದ 10,000 ರೂ. ಸಾಲ ಮಂಜೂರು ಮಾಡಿದೆ ಎಂದರು.

ಬೀದಿ ಬದಿಯ ವ್ಯಾಪಾರಸ್ಥರಿಗೆ ಮೀಟರ್‌ ಬಡ್ಡಿಗೆ ಸಾಲ ಪಡೆದು ಅದನ್ನು ತೀರಿಸಲಾಗದೆ ಹಿಂದುಳಿದಿದ್ದರು. ಅಂತಹ ವ್ಯಾಪಾರಿಗಳನ್ನು ಗುರುತಿಸಿ ಬಡ್ಡಿ ಇಲ್ಲದೆ ಸಾಲ ಮಂಜೂರು ಮಾಡಲಾಗಿದೆ. ಇದರು ಮೀಟರ್‌ ಬಡ್ಡಿಗೆ ಕಡಿವಾಣ ಹಾಕಿದಂತಾಗಿದೆ ಎಂದು ಹೇಳಿದರು.

ಹೊಸಪೇಟೆ ಕೇಂದ್ರ ಬಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಗುಂಡುಮಣುಗು ತಿಪ್ಪೇಸ್ವಾಮಿ, ಎಂ. ಗುರುಸಿದ್ಧನಗೌಡ, ಹೊಸಪೇಟೆ ಸಹಾಯಕ ಆಯುಕ್ತ ಲೋಕೇಶ್‌, ತಹಶೀಲ್ದಾರ್‌ ಮಂಜುನಾಥ, ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಪಿ.ಎಚ್. ದೊಡ್ಡರಾಮಣ್ಣ, ಬ್ಯಾಂಕಿನ ವ್ಯವಸ್ಥಾಪಕ ಶ್ರೀಧರ, ಮಂಜುನಾಥ ಗೌಡ್ರು, ಬ್ಯಾಂಕಿನ ಸಿಬ್ಬಂದಿ, ಮುಖಂಡರಾದ ಎಪಿಎಂಸಿ. ಅಧ್ಯಕ್ಷ ಬೂದಿ ಶಿವಕುಮಾರ, ಐ.ಎಂ. ದ್ವಾರಕೇಶ್‌, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next