ಕೋಲಾರ: ಕೋವಿಡ್ ಆರ್ಥಿಕಪ್ಯಾಕೇಜ್ ಘೋಷಣೆ ಮಾಡುವಜೊತೆಗೆ ಸೋಂಕಿತರು ಇರುವಆಸ್ಪತ್ರೆಗಳಿಗೆ ಮೂಲ ಸೌಕರ್ಯ ಒದಗಿಸಿ,ಮೃತಪಟ್ಟ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕೆಂದು ಒತ್ತಾಯಿಸಿರೈತ ಸಂಘದಿಂದ ಉಪ ಮುಖ್ಯಮಂತ್ರಿಅಶ್ವತ್ಥನಾರಾಯಣಗೆ ಮನವಿಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ, ದೇವರು ವರಕೊಟ್ಟರೂ ಪೂಜಾರಿ ನೀಡಲಿಲ್ಲ ಎಂಬಗಾದೆಯಂತೆ ಜಿಲ್ಲಾಸ್ಪತ್ರೆಯಲ್ಲಿವೆಂಟಿಲೇಟರ್, ಆಕ್ಸಿಜನ್ ಅಲ್ಪಮಟ್ಟಿಗೆಇದ್ದರೂ ಅದನ್ನು ಸಮರ್ಪಕವಾಗಿನಿರ್ವಹಣೆ ಮಾಡಲು ಸಿಬ್ಬಂದಿಕೊರತೆಯಿಂದ ಜಿಲ್ಲಾಸ್ಪತ್ರೆ ಕೊರೊನಾಯಮನ ಆಸ್ಪತ್ರೆಯಾಗಿ ಮಾರ್ಪಟ್ಟಿದೆಎಂದು ದೂರಿದರು.
ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿಮಂಜುನಾಥ್ ಮಾತನಾಡಿ, 14 ಕಠಿಣಕರ್ಫ್ಯೂ ಜಾರಿ ಮಾಡಿದ್ದು ಸರಿ ಇದೆ.ಆದರೆ, ದುಡಿಯುವ ಕೈಗಳಿಗೆಕೆಲಸವಿಲ್ಲ. ಬೆಳೆದ ಬೆಳೆಗಳಿಗೆಬೆಲೆಯಿಲ್ಲ, ಕಂಗಾಲಾಗಿರುವ ರೈತಕೂಲಿ ಕಾರ್ಮಿಕರ ಕುಟುಂಬ ನಿರ್ವಹಣೆಗೆ ಸರ್ಕಾರ 10 ಸಾವಿರ ರೂ.ಮಾಸಿಕ ವೇತನ ನೀಡಬೇಕು,ಕೊರೊನಾ ಆರ್ಥಿಕ ಪ್ಯಾಕೇಜ್‌ಘೋಷಣೆ ಮಾಡಬೇಕು ಎಂದುಆಗ್ರಹಿಸಿದರು.
ಮನವಿ ಸ್ವೀಕರಿಸಿಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಕೊರೊನಾ ಸೋಂಕಿತರಿಗೆಆಕ್ಸಿಜನ್, ವೆಂಟಿ ಲೇಟರ್, ಬೆಡ್‌ಗಳಕೊರತೆಯಿಲ್ಲ. ಮುಂದಿನ ದಿನಗಳಲ್ಲಿಸಾವಿನ ಪ್ರಮಾಣ ಕಡಿಮೆ ಮಾಡಲುಎಲ್ಲಾ ಕ್ರಮಕೈಗೊಳ್ಳಲಾಗುವುದಾಗಿಭರವಸೆ ನೀಡಿದರು. ಮಹಿಳಾ ಘಟಕದಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ತಾಲೂಕುಅಧ್ಯಕ್ಷ ಈಕಂಬಳ್ಳಿ ಮಂಜುನಾಥ್,ಮಂಗಸಂದ್ರ ನಾಗೇಶ್, ವಡಗೂರುಮಂಜುನಾಥ್ ಉಪಸ್ಥಿತರಿದ್ದರು.