Advertisement

ಬಿಪಿಎಲ್‌ ಕುಟುಂಬಕ್ಕೆ 10 ಸಾವಿರ ರೂ. ಘೋಷಿಸಿ

12:06 PM Jun 26, 2021 | Team Udayavani |

ದಾವಣಗೆರೆ: ಕೋವಿಡ್ ಹಾವಳಿ, ಲಾಕ್‌ ಡೌನ್‌ನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಸರ್ಕಾರ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಕೊಳೆಗೇರಿ ಜನಾಂದೋಲನ ಕರ್ನಾಟಕ ಸಮಿತಿಯ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಒತ್ತಾಯಿಸಿದರು.

Advertisement

ಸ್ಲಂ ಜನಾಂದೋಲನ ಕರ್ನಾಟಕ ಸಮಿತಿ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ, ಎಪಿಪಿಐ ಸಹಯೋಗದಲ್ಲಿ ವಿಮಾನ ಮಟ್ಟಿ ಇತರೆಡೆ ಕೋವಿಡ್‌ ಸಂಕಷ್ಟದಲ್ಲಿರುವ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಬಿಪಿಎಲ್‌ ಕುಟುಂಬಕ್ಕೆ ಸರ್ಕಾರ 10 ಸಾವಿರ ಪರಿಹಾರ ಘೋಷಣೆಮಾಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್‌ ಸಮಯದಲ್ಲಿ ಸೋಂಕಿಗೆ ಒಳಗಾದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಬೇಕು. ಸೋಂಕಿನಿಂದ ಮರಣ ಹೊಂದಿದವರ ಕುಟುಂಬಕ್ಕೆ ನೀಡುತ್ತೇವೆ ಎಂದು ಹೇಳಲಾಗಿರುವ 1 ಲಕ್ಷ ರೂಪಾಯಿ ಪರಿಹಾರವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು. ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್‌ಗಳುತಾರತಮ್ಯದಿಂದ ಕೂಡಿವೆ. ಹಾಗಾಗಿ ಎಲ್ಲರಿಗೂ ಅನ್ವಯವಾಗುವಂತೆ ಸರಿಸಮನಾದ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಎಲ್‌.ಎಚ್‌.ಅರುಣ್‌ ಕುಮಾರ್‌ ಮಾತನಾಡಿ, ಕೋವಿಡ್‌ನ‌ಂತಹ ಸಾಂಕ್ರಾಮಿಕ ರೋಗದಿಂದಾಗಿ ಬಡತನ ಹೆಚ್ಚಾಗಿದೆ. ಲಕ್ಷಾಂತರ ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿದೆ. ಜನರ ಜೀವನ ಕ್ರಮ ಬದಲಾಗಿ ಸಂಘ ಜೀವಿಯಾಗಿದ್ದಮನುಷ್ಯ ಈಗ ಅಕ್ಷರಶಃ ಏಕಾಂಗಿಯಾಗಿ ಜೀವ ಮತ್ತು ಜೀವನಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಘನತೆಯ ಬದುಕನ್ನುಕಟ್ಟಿಕೊಡುವುದು ಸರ್ಕಾರ ಜವಾಬ್ದಾರಿ. ಸರ್ಕಾರದ ಜತೆಗೆ ಸಂಕಷ್ಟಕ್ಕೆ ಒಳಗಾಗಜನರ ಸಹಾಯಕ್ಕೆ ಬರಬೇಕಾಗಿರುವುದು ಮಾನವೀಯ ಸಮಾಜದ ನೈತಿಕಜವಾಬ್ದಾರಿಯೂ ಸಹ ಆಗಿದೆ. ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಬೇಕು ಎಂದು ಮನವಿ ಮಾಡಿದರು.

Advertisement

ಅಂಕಿ ಅಂಶಗಳ ಪ್ರಕಾರ ಕೊರೊನಾ ಸೋಂಕು, ಹಸಿವಿನಿಂದ ಮರಣಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ವಿಷಯವಾಗಿದೆ. ಕೊಳೆಗೇರಿ ಜನಾಂದೋನ ಸಮಿತಿ ಇತರೆ ದಾನಿಗಳ ಸಹಾಯದಿಂದ ಸಂಕಷ್ಟದಲ್ಲಿರುವವರ ನೆರವಿಗೆ ಬಂದಿರುವುದು ಪ್ರಶಂಶನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಳೆಗೇರಿ ಜನಾಂದೋಲನ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಹಾವೇರಿ ಮಾತನಾಡಿ, ಮುಂಬರುವ ದಿನಗಳಲ್ಲಿ ಮಕ್ಕಳ ಮೇಲೆಬೀರಲಿರುವ ಕೋವಿಡ್‌ನ‌ 3ನೇ ಅಲೆಗೂ ಮುನ್ನ ಎಲ್ಲರಿಗೂ ವಿಮೆಯ ಮೂಲಕ ಉಚಿತ ಚಿಕಿತ್ಸೆಗೆ ನೆರವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊಳೆಗೇರಿ ಜನಾಂದೋಲನ ಕರ್ನಾಟಕ ಸಮಿತಿಯ ಗೌರವ ಅಧ್ಯಕ್ಷ ಎಂ. ಶಬ್ಬೀರ್‌ ಸಾಬ್‌, ಅಧ್ಯಕ್ಷೆ ಶಹೀನಾಬೇಗಂ, ಪದಾಧಿಕಾರಿಗಳಾದ ಸಾವಿತ್ರಮ್ಮ, ಬಾಲಪ್ಪ, ಸುಹೀಲ್‌ಬಾಷಾ ,ಗೃಹ ಕಾರ್ಮಿಕರ ಸಂಘದ ಕಾರ್ಯದರ್ಶಿ ರಂಗಮ್ಮ, ಲಕ್ಷ್ಮಿ, ರಮೇಶ್‌ ಇತರರು ಇದ್ದರು. ಬಾಷಾ ನಗರದ ವಿವಿಧ ಭಾಗಗಳಲ್ಲಿನ ಸ್ಲಂ ನಿವಾಸಿಗಳಿಗೆ, ಹಮಾಲಿಗಳಿಗೆ ದಿನಸಿ ಕಿಟ್‌ ಹಾಗೂ ಮಾಸ್ಕ್ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next