ಇಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಕನ್ನಡ ಸಿನಿಮಾಗಳನ್ನು ವಿದೇಶಿ ಕನ್ನಡಿಗರಿಗೂ ತೋರಿಸುವ ಉದ್ದೇಶ ಯಾವ ನಿರ್ದೇಶಕ,
ನಿರ್ಮಾಪಕರಿಗೆ ಇರೋದಿಲ್ಲ ಹೇಳಿ? ಆದರೆ, ತೋರಿಸೋದು ಇಷ್ಟು ಸುಲಭವಾ? ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎನ್ನುವ ಮಾತಿದೆ.
Advertisement
ಹಾಗಿರುವಾಗ ಬೇರೆ ದೇಶಗಳಲ್ಲಿ, ಚಿತ್ರಮಂದಿರಗಳು ಸಿಗುತ್ತವಾ ಅಥವಾ ಬೇರೆ ದೇಶಗಳಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಸುಲಭವಾಗಿದೆಯಾ ಎಂಬ ಪ್ರಶ್ನೆಗಳು ಸಹಜವೇ. ಪ್ರಮುಖವಾಗಿ ಕನ್ನಡ ಚಿತ್ರಗಳನ್ನು ವಿದೇಶಿ ನೆಲದಲ್ಲಿಬಿಡುಗಡೆ ಮಾಡುವುದಕ್ಕೆ ಒಂದಿಷ್ಟು ಮಾರ್ಗಗಳಿವೆ. ಮೊದಲೆಲ್ಲಾ ಕೆಲ ಸಂಘಟನೆಗಳು ಮುಂದೆ ನಿಂತು, ಯಶಸ್ವಿ ಸಿನಿಮಾಗಳನ್ನು
ಅಲ್ಲಿಗೆ ತರಿಸಿಕೊಂಡು ಪ್ರದರ್ಶನ ಮಾಡುತ್ತಿದ್ದವು. ಈಗ ಆ ವ್ಯವಸ್ಥೆಯ ಜತೆಯಲ್ಲಿ ಎರಮೂರು ಕಂಪೆನಿಗಳೇ ಈ ರೀತಿಯ ವ್ಯವಸ್ಥೆಗೆ
ನಿಂತಿವೆ. ಅವರೇ, ಎಲ್ಲಾ ದೇಶಗಳಲ್ಲೂ ಬೇಕಾದ ಸಿನಿಮಾಗಳನ್ನು ತರಿಸಿಕೊಂಡು ರಿಲೀಸ್ ಮಾಡುತ್ತಿದ್ದಾರೆ. ಯಾವಾಗ ಕನ್ನಡ ಸಿನಿಮಾಗಳು ಸಾಗರ ದಾಟಿ ಹೋಗಲು ಶುರುಮಾಡಿದವೋ, ಕನ್ನಡಿಗರಿಗೆ ಕನ್ನಡ ಸಿನಿಮಾ ಮೇಲೆ ಪ್ರೀತಿ ಹೆಚ್ಚಾಗಿದೆ. ಪ್ರತಿ ಸಿನಿಮಾಗಳ ವಿಮರ್ಶೆ, ಗಳಿಕೆ ಎಲ್ಲವನ್ನೂ ತಿಳಿದು ಡಿಮ್ಯಾಂಡ್ ಮಾಡಿ ತರಿಸಿಕೊಳ್ಳುತ್ತಿದ್ದಾರೆ. ಅಲ್ಲೂ ಸಹ ಪಬ್ಲಿಸಿಟಿ ಬೇಕು. ಅದನ್ನು ಅವರೇ ಆನ್‌ಲೈನ್ ಮೂಲಕ ಮಾಡುತ್ತಾರೆ.
ಸಿನಿಮಾಗಳಿಗೆ ಸಂಬಂಧಿಸಿದ ಪೋಸ್ಟರ್ಗಳನ್ನೆಲ್ಲಾ ರವಾನೆ ಮಾಡಲಾಗುತ್ತದೆ. ಈಗಂತೂ ಡಿಜಿಟಲ್ ಇರುವುದರಿಂದ ಪಬ್ಲಿಸಿಟಿಗೇನೂ ಕೊರತೆ ಇಲ್ಲ. ಕೋಟಿ ಬರುತ್ತೆ ಎಂಬುದಂತೂ ಸುಳ್ಳು:
ಪ್ರಮುಖವಾಗಿ ವಿದೇಶಗಳಲ್ಲಿ ಬಿಡುಗಡೆಯಾದ ಚಿತ್ರಗಳಿಂದ ಚೆನ್ನಾಗಿ ದುಡ್ಡು ಬರುತ್ತದೆ ಎಂಬ ನಂಬಿಕೆ ಇಲ್ಲಿದೆ. ಆದರೆ, ಅದು ಸುಳ್ಳು ಎನ್ನುತ್ತಾರೆ ವಿತರಕ ಜಾಕ್ ಮಂಜು. ಅಲ್ಲೂ ಕೂಡ ವಿತರಣೆ ಮಾಡುವ ಕಂಪೆನಿಗಳು ಅಥವಾ ಜವಾಬ್ದಾರಿ ವಹಿಸಿಕೊಂಡ ವಿತರಕರು ಥಿಯೇಟರ್ ಶೇರ್ ನೋಡಿಕೊಂಡು ವ್ಯವಹಾರ ಮಾಡುತ್ತಾರೆ. ಗಳಿಕೆ ಕಡಿಮೆಯಾದರೆ, ನಿರ್ಮಾಪಕರಿಗೇನೂ ಸಿಗಲ್ಲ. ಗಳಿಕೆ ಜಾಸ್ತಿಯಾದರೆ, ಅಲ್ಲಿನ ಖರ್ಚುವೆಚ್ಚ ನೋಡಿಕೊಂಡು, ಅವರಿಗೂ ಹಣ ಉಳಿಸಿಕೊಂಡು ಉಳಿದದ್ದನ್ನು ಕೊಡುತ್ತಾರೆ. ಹಾಗಂತ, ವಿದೇಶದಲ್ಲಿ ರಿಲೀಸ್ ಆಗುವ ಎಲ್ಲಾ ಸಿನಿಮಾಗಳಿಂದಲೂ ಕೋಟಿ ಬರುತ್ತೆ ಎಂಬುದಂತೂ ಸುಳ್ಳು. ಅಲ್ಲಿ ಇಂತಿಷ್ಟು ಡಾಲರ್‌ಗೆ ಟಿಕೆಟ್ ದರ ನಿಗದಿ ಮಾಡಿ, ಪ್ರದರ್ಶನ ಮಾಡಲಾಗುತ್ತದೆ. ಈ ವ್ಯವಸ್ಥೆ ಇನ್ನಷ್ಟು ಜೋರಾಗಿ ಆಗಬೇಕು. ಹಾಗಾದರೆ ಮಾತ್ರ ಈಗಿರುವ ಕನ್ನಡ ಮಾರುಕಟ್ಟೆ ಇನ್ನೂ ಹೆಚ್ಚಾಗಲು ಸಾಧ್ಯ’ ಎನ್ನುತ್ತಾರೆ ಜಾಕ್ ಮಂಜು. ಕೆಲವೊಮ್ಮೆ ಪ್ರದರ್ಶನ ಮಾಡಿದ್ದಷ್ಟೇ ಲಾಭ: ವಿದೇಶದಲ್ಲಿ
ಬಿಡುಗಡೆಯಾಗುವ ಎಲ್ಲಾ ಚಿತ್ರಗಳೂ ದೊಡ್ಡ ಹಿಟ್ ಆಗುತ್ತವೆ, ಅದರಿಂದ ನಿರ್ಮಾಪಕರಿಗೆ ದೊಡ್ಡ ಮೊತ್ತ ಬರುತ್ತದೆ ಎಂಬುದೆಲ್ಲಾ
ನಿಜವಲ್ಲ. ಕೆಲವೊಮ್ಮೆ ವಿದೇಶಿ ನೆಲದಲ್ಲಿ ಪ್ರದರ್ಶನ ಮಾಡಿದ್ದಷ್ಟೇ ಲಾಭ ಎನ್ನುವಂತಹ ಪರಿಸ್ಥಿತಿಯೂ ಇಲ್ಲದಿಲ್ಲ. ವಿದೇಶಗಳಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆಂದೇ ಕೆಲವು ವ್ಯಕ್ತಿಗಳಿದ್ದಾರೆ. ಒಂದು ಥಿಯೇಟರ್ ಅನ್ನು ಒಂದು ದಿನದ ಎಲ್ಲಾ ಪ್ರದರ್ಶನಗಳ ಬಾಡಿಗೆ ಪಡೆದು, ಅಲ್ಲಿಗೆ ಚಿತ್ರವನ್ನು ಹಾಕುತ್ತಾರೆ. ಎಲ್ಲಾ ಉಸ್ತುವಾರಿಯನ್ನು ಅವರೇ ವಹಿಸಿಕೊಂಡು, ತಮ್ಮ ಕೈಯಲ್ಲಾದಂತಹ ಹಣವನ್ನು ಮೊದಲು ಅಲ್ಲಿ ಪಾವತಿಸಿ, ಆ ಬಳಿಕ ಕಲೆಕ್ಷನ್‌ನಲ್ಲಿ ಬಂದಂತಹ ಹಣವನ್ನು ಲೆಕ್ಕ ಹಾಕಿ, ಉಳಿದರೆ ಮಾತ್ರ ನಿರ್ಮಾಪಕರಿಗೆ ಕೊಡುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರ ಸಂಖ್ಯೆ ಜಾಸ್ತಿ ಇದ್ದರೆ, ಪ್ರದರ್ಶನದ ಲೆಕ್ಕವೆಲ್ಲಾ ಕಳೆದು ನಿರ್ಮಾಪಕರಿಗೆ ಒಂದಿಷ್ಟು ದುಡ್ಡು ಬರುತ್ತದೆ. ಇಲ್ಲ, ಕನ್ನಡ ಸಿನಿಮಾ ವಿದೇಶಿ ನೆಲದಲ್ಲಿ ಪ್ರದರ್ಶನ ಮಾಡಿದ್ದಷ್ಟೇ ಲಾಭ.
Related Articles
ಒಂದೆರೆಡು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬೇಕಾದರೆ ಯಾವ ಸಿನಿಮಾಗಳೂ ಸೆನ್ಸಾರ್ ಮಾಡಿಸಲ್ಲ. ಹೆಚ್ಚು ಚಿತ್ರಮಂದಿರಗಳಲ್ಲಿ
ಆವರಿಸಿಕೊಂಡರೆ ಮಾತ್ರ ಸೆನ್ಸಾರ್‌ಗೆ ಹೋಗುತ್ತವೆ. ಈ ಕುರಿತು ಮಾತನಾಡುವ “ಜೂಮ್’ ಚಿತ್ರದ ನಿರ್ದೇಶಕ ಪ್ರಶಾಂತ್
ರಾಜ್. “ನಮ್ಮ ಚಿತ್ರ ಆ ದೇಶದ ಕೆಲ ರಾಜ್ಯಗಳ ಬಹುತೇಕ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಬೇಕು ಅನ್ನುವುದಾದರೆ, ಆಗ ಮಾತ್ರ ನಮ್ಮ ಚಿತ್ರಕ್ಕೆ ವಿದೇಶದಲ್ಲೂ ಸೆನ್ಸಾರ್ ಮಾಡಿಸಬೇಕು. ನಮ್ಮ “ಜೂಮ್’ ಚಿತ್ರವನ್ನು ಇಂಗ್ಲೆಂಡ್‌ನ ಹಲವು ರಾಜ್ಯಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ನಮಗಿತ್ತು. ಯಾಕೆಂದರೆ, ಬಹಳಷ್ಟು ಕನ್ನಡಿಗರಿಂದ “ಜೂಮ್’ಗೆ ಬೇಡಿಕೆ ಇತ್ತು. ಒಂದು ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವುದಾದರೆ, ಅಲ್ಲಿನ ಕನ್ನಡ ಸಂಘದ ಯಾರಾದರೊಬ್ಬರು, ಚಿತ್ರಮಂದಿರವನ್ನು ಬಾಡಿಗೆ ಪಡೆದು,
ಒಂದು ದಿನ ಚಿತ್ರ ಪ್ರದರ್ಶಿಸಬಹುದು. ಆದರೆ, ಎಲ್ಲಾ ಕಡೆ ಇರುವ ಕನ್ನಡಿಗರಿಗೆ ಚಿತ್ರ ತಲುಪಿಸಬೇಕಾದರೆ, ಆ ದೇಶದಲ್ಲಿರುವ ಕೆಲ ರಾಜ್ಯಗಳಲ್ಲಿ ಚಿತ್ರ ಬಿಡುಗಡೆ ಮಾಡಲೇಬೇಕು. ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಬೇಕಾದರೆ, ಸೆನ್ಸಾರ್ ಆಗಬೇಕು. ಹಾಗಾಗಿ “ಜೂಮ್’ ಚಿತ್ರ ಯುಕೆ ಸೆನ್ಸಾರ್ ಬೋರ್ಡ್‌ನಲ್ಲಿ ಸೆನ್ಸಾರ್ ಆದಂತಹ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಇದೆ’ ಎನ್ನುತ್ತಾರೆ ಪ್ರಶಾಂತ್ ರಾಜ್.ಕನ್ನಡ ಚಿತ್ರಗಳು ಬೇರೆ ಭಾಷೆಯ ಚಿತ್ರಗಳಿಗಿಂತ ಕಡಿಮೆ ಏನೂ ಇಲ್ಲ. ಕೇವ ಲಾಭದ
ದೃಷ್ಟಿಯಿಂದಲೇ ಎಲ್ಲವನ್ನೂ ನೋಡಬಾರದು. ನಮ್ಮ ಚಿತ್ರಗಳೂ ವಿದೇಶದಲ್ಲಿ ರಿಲೀಸ್ ಆಗಬೇಕು ಎಂಬ ಮನೋಭಾವ ಇಟ್ಟುಕೊಂಡರೆ, ಮಾರುಕಟ್ಟೆ ವಿಸ್ತಾರ ಸಾಧ್ಯ. ಈಗ ಎಲ್ಲರೂ ಅಪ್‌ಗೆಡ್ ಆಗುವ ಅಗತ್ಯವೂ ಇದೆ. ಈಗಂತೂ ಡಿಜಿಟಲ್ ಆಗಿರುವುದರಿಂದ ಹೆಚ್ಚು ಉಪಯೋಗವಿದೆ. ಮೊದಲೆಲ್ಲಾ ಹೊರದೇಶದಲ್ಲಿ ಸಿನಿಮಾ ರಿಲೀಸ್ ಮಾಡೋದು ಕಷ್ಟಕರವಾಗಿತ್ತು. ಈಗ ಕುಳಿತಲ್ಲೇ, ನಮ್ಮ ಸಿನಿಮಾವನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಿದೆ. ಹಾಗಾಗಿ, ಸುಲಭ ಮಾರ್ಗೋಪಾಯ ಮೂಲಕ ಕನ್ನಡ ಸಿ
ನಿಮಾವನ್ನು ಸಾಗರದಾಚೆಗೂ ತಲು ಪಿಸಲು ನಿರ್ಮಾಪಕ, ನಿರ್ದೇಶಕರು ಮುಂದಾಗಬೇಕು. ಹಾಗಾದಾಗಲಷ್ಟೇ ಕನ್ನಡ ಚಿತ್ರಗಳು
ಹೆಚ್ಚಿ ಸಂಖ್ಯೆಯಲ್ಲಿ ವಿದೇಶದಲ್ಲಿ ಬಿಡುಗಡೆಯಾಗುವುದಕ್ಕೆ ಸಾಧ್ಯ ಎಂದರೆ ತಪ್ಪಿಲ್ಲ.
Advertisement
ವಿಜಯ್ ಭರಮಸಾಗರ