Advertisement

ಚಿತ್ರನಟಿ ಜಯಂತಿಗೆ ಬಿ. ಸರೋಜಾದೇವಿ ಪ್ರಶಸ್ತಿ

11:53 AM Apr 08, 2017 | |

ಬೆಂಗಳೂರು: ಬಹುಭಾಷಾ ನಟಿ ಜಯಂತಿ ಅವರಿಗೆ  2017ನೇ ಸಾಲಿನ ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.  ಭಾರತೀಯ ವಿದ್ಯಾಭವನ ಪ್ರತಿವರ್ಷ ನೀಡುವ ಬಿ.ಸರೋಜಾದೇವಿ ಪ್ರಶಸ್ತಿಗೆ ಜಯಂತಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ವಿದ್ಯಾಭವನದ ಪ್ರಕಟಣೆ ತಿಳಿಸಿದೆ. 

Advertisement

ಜೇನುಗೂಡು ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಜಯಂತಿ ಚಂದವಳ್ಳಿ ತೋಟ, ಬೆಟ್ಟದ ಹೂವು, ಮಿಸ್‌ ಲೀಲಾವತಿ, ಎಡಕಲು ಗುಡ್ಡದ ಮೇಲೆ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್‌ 16 ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿದ್ಯಾಭವನ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next