Advertisement

ಅಸ್ತಿಮಜ್ಜೆ, ಕಸಿ ಸೇವೆ ಆರಂಭಕ್ಕೆ ಚಿಂತನೆ: ಡಾ|ಬಲ್ಲಾಳ್‌

01:10 AM Oct 24, 2020 | mahesh |

ಉಡುಪಿ: ಎಂಸಿಸಿಸಿಸಿ ರೋಗಿಗಳ ಬಳಕೆಗಾಗಿ ಆ್ಯಪ್‌ ಮೂಲಕ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಇದು ಜನರಿಗೆ ತುಂಬಾ ಉಪಯೋಗವಾಗಲಿದೆ. ಮುಂಬಯಿಯಿಂದ ಕೊಚ್ಚಿನ್‌ವರೆಗೆ ಈ ಕರಾವಳಿ ಪ್ರದೇಶದಲ್ಲಿ ಲಭ್ಯವಿಲ್ಲದ ಅಸ್ತಿಮಜ್ಜೆ, ಕಸಿ ಸೇವೆಗಳನ್ನು ಆರಂಭದಲ್ಲಿ 6 ಹಾಸಿಗೆಗಳೊಂದಿಗೆ (4 ವಯಸ್ಕ + 2 ಮಕ್ಕಳ) ಪ್ರಾರಂಭಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಹೇಳಿದರು.

Advertisement

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಮಗ್ರ ಕ್ಯಾನ್ಸರ್‌ ಆರೈಕೆ ಕೇಂದ್ರ (ಎಂಸಿಸಿಸಿಸಿ)ದಲ್ಲಿ ಶುಕ್ರವಾರ ನಡೆದ ಎರಡನೇ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಪ್ರಶಾಮಕ ಆರೈಕೆ ಮತ್ತು ಸಹಾಯಕ ವಿಭಾಗವು ದೀರ್ಘ‌ಕಾಲದ ಮತ್ತು ಮಧ್ಯಸ್ಥಿಕೆ ನೋವಿನ ವಿಭಾಗವನ್ನು ಪ್ರಾರಂಭಿಸುವ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದೆ. ಶೀಘ್ರದಲ್ಲೇ ಮಕ್ಕಳ ಪ್ರಶಾಮಕ ಆರೈಕೆ, ಮೂತ್ರಪಿಂಡದ ಬೆಂಬಲ ಆರೈಕೆ ಮತ್ತು ನರವಿಜಓನ ಪ್ರಶಾಮಕ ಆರೈಕೆ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಸ್ಟ್ರೇಲಿಯಾ ಸರಕಾರದ “ಕ್ಯಾನ್ಸರ್‌ ಆಸ್ಟ್ರೇಲಿಯ’ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ| ಡೊರೊಥಿ ಕೀಫೆ ಅವರು ಭಾಗವಹಿಸಿದ್ದರು. ಮಣಿಪಾಲ್‌ ಹೆಲ್ತ… ಎಂಟರ್‌ಪ್ರೈಸೆಸ್‌ ಪ್ರೈವೇಟ್‌ ಲಿ. ಮುಖ್ಯಸ್ಥ ಡಾ| ಸುದರ್ಶನ್‌ ಬಲ್ಲಾಳ್‌, ಕುಲಪತಿ ಲೆ| ಜ| ಡಾ| ವೆಂಕಟೇಶ್‌, ಸಹ ಕುಲಪತಿ ಡಾ| ಪಿ.ಎಲ್‌.ಎನ್‌.ಜಿ. ರಾವ್‌ ಗೌರವ ಅತಿಥಿಗಳಾಗಿದ್ದರು. ಕಸ್ತೂರ್ಬಾ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಎಂಸಿಸಿಸಿಸಿಯ ಸಂಯೋಜಕರಾದ ಡಾ| ನವೀನ್‌ ಎಸ್‌. ಸಲಿನ್ಸ್‌ ಉಪಸ್ಥಿತರಿದ್ದರು.

ಕೆಎಂಸಿ ಡೀನ್‌ ಡಾ| ಶರತ್‌ ಕುಮಾರ್‌ ರಾವ್‌ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ವಂದಿಸಿದರು. ನ್ಯೂಕ್ಲಿಯರ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ| ಸುಮಿತ್‌ ಎಸ್‌. ಮಾಲಾಪುರೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next