Advertisement

ಅನ್ನದಾತನ ಬದುಕು ಸಂಕಷ್ಟದಲ್ಲಿದೆ

11:40 AM Jan 16, 2018 | Team Udayavani |

ಕೆಂಗೇರಿ: ಜನರ ಬದುಕು ಹಸನು ಮಾಡುವ ದೇಶದ ಬೆನ್ನಲಬು ಎಂದು ಕರೆಸಿಕೊಳ್ಳುವ ಅನ್ನದಾತ ರೈತನ ಬದುಕು ಇಂದು ಸಂಕಷ್ಟದಲ್ಲಿದೆ ಎಂದು ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್‌ ಗುರೂಜಿ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಬಸವೇಶ್ವರ ಭಕ್ತ ಮಂಡಳಿ ವತಿಯಿಂದ ಭಾನುವಾರ ಕೆಂಗೇರಿ ಹೋಬಳಿಯ ಸೋಂಪುರ‌ದ ಚನ್ನವೀರಯ್ಯನಪಾಳ್ಯದಲ್ಲಿ ಹಮ್ಮಿಕೊಂಡಿದ್ದ “ಸಂಕ್ರಾಂತಿ ಹಬ್ಬದ ಜಾತ್ರಾ ಮಹೋತ್ಸವ, ಕಡಲೇಕಾಯಿ ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಷ್ಟದಲ್ಲಿ ಇರುವ ರೈತನ ನೆರವಿಗೆ ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದರು.

ರೈತರ ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಸಮರ್ಪಕ ಯೋಜನೆಗಳನ್ನು ರೂಪಿಸಬೇಕು ಜತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ಕೇಂದ್ರ ಸಚಿವ ಅನಂತ್‌ ಕುಮಾರ್‌ ಮಾತನಾಡಿ, ಮುಗ್ಧ ಮನಸ್ಸಿನ ಹಳ್ಳಿಯ ವಾತಾವರಣದ ಬದುಕು ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಹಳ್ಳಿಯ ಬದುಕು ಒಳ್ಳೆಯ ಬದುಕು ಎಂಬುದಕ್ಕೆ ಸಾಮರಸ್ಯದ ಜೀವನವೇ ಸಾಕ್ಷಿಯಾಗಿದೆ. ಹಳ್ಳಿಯಲ್ಲಿ ಪರಸ್ಪರ ಗುರುಹಿರಿಯರನ್ನ ಗೌರವಿಸುವ ವಾತಾವರಣವಿದ್ದು ಎಲ್ಲರಿಗೂ ಅದು ಪ್ರೇರಣೆಯಾಗಬೇಕಾಗಿದೆ ಎಂದರು. 

ಕನಕಪುರ ದೇಗುಲ ಮಠದ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿ, ಗ್ರಾಮಿಣ ಪ್ರದೇಶದ ಇಂತಹ ಆಚರಣೆಗಳು ತಲತಲಾಂತರಗಳಿಂದ ನಡೇದುಕೊಂಡು ಬಂದಿರುವ ಪರಿಣಾಮ ನಮ್ಮ ಕಲೆ ಸಂಸ್ಕೃತಿ ಆಚಾರ ವಿಚಾರಗಳು ಉಳಿದಿವೆ ಎಂದು ಹೇಳಿದರು.

Advertisement

ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಎಂ.ರುದ್ರೇಶ್‌ ಮಾತನಾಡಿ ರೈತರು ಬೆಳೆದಿರುವ ಬೆಳೆಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಕಡಲೆಕಾಯಿ ಪರಿಷೆಯ ಜೊತೆಗೆ 60 ವಸಂತಗಳನ್ನ ಪೂರೈಸಿರುವ ರೈತ ದಂಪತಿಗಳಿಗೆ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದರು. 

ಸಮಾರಂಭದಲ್ಲಿ ಕನಕಪುರ ಮರಳೆಗವಿ ಮಠದ ಶಿವರುದ್ರ ಮಹಾಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎ. ಶಿವಕುಮಾರ್‌, ಹಾಲಿ ಸದಸ್ಯ ಮರಿಸ್ವಾಮಿ, ಮಾಜಿ ಸಚಿವ ರಾಮಚಂದ್ರೇ ಗೌಡ, ಬಿಜೆಪಿ ಮುಖಂಡರಾದ ಗಾಣಿಗರಪಾಳ್ಯ ರಾಮಸ್ವಾಮಿ, ಪರಮಶಿವಯ್ಯ, ರಘು ಮತ್ತಿತರರು ಪಾಲ್ಗೊಂಡಿದ್ದರು. 

ಜಾತ್ರೆ ಅಂಗವಾಗಿ ಬೆಳಿಗ್ಗೆಯಿಂದಲೇ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಬಾಗಗಳಿಂದ ಆಗಮಿಸಿದ ಡೊಳ್ಳು, ಪೂಜಾ ಕುಣಿತ, ವೀರಗಾಸೆ, ಗಾರುಡಿಗೊಂಬೆ ಪ್ರದರ್ಶನ ನೀಡಿದರು.ಸುತ್ತಮುತ್ತಲ ಗ್ರಾಮದ ಕಬ್ಟಾಳಮ್ಮ ದೇವಿ, ಮಾರಮ್ಮ ದೇವಿಯ ಪಲ್ಲಕಿ ಉತ್ಸವ ಆಚರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next