Advertisement
ಇಲ್ಲಿನ ಸಿದ್ಧಾಶ್ರಮದಲ್ಲಿ ಸಿದ್ಧಾರೂಢರ ಶಿವ ಪಂಚಾಕ್ಷರಿ ಭಜನಾ ಸಪ್ತಾಹ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ “ಅನ್ನದಾತ ಸುಖೀಭವ’ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ರೈತರಲ್ಲಿ ತಾವು ಕನಿಷ್ಠರೆಂಬ ಕೀಳರಿಮೆ ಭೂತ ಹೊಕ್ಕಿದ್ದು, ಅದನ್ನು ರೈತರುಮೊದಲು ಒಧ್ದೋಡಿಸಬೇಕಿದೆ. ಪೂರ್ವಜರ ಕೃಷಿ ಪದ್ಧತಿ ಸಂರಕ್ಷಣೆಗೆ ಕಂಕಣತೊಡಬೇಕಿದೆ ಎಂದರು.
Related Articles
Advertisement
ರಸಗೊಬ್ಬರ, ಕ್ರಿಮಿನಾಶಕ ಗೊಬ್ಬರ ಆಧಾರಿತ ಕೃಷಿಯ ಬೆನ್ನು ಬಿದ್ದು ಭೂಮಿಯ ಆರೋಗ್ಯ ಹಾಳು ಮಾಡಿದ್ದೇವಷ್ಟೇ ಅಲ್ಲ. ವಿಷಯುಕ್ತ ಆಹಾರ, ತರಕಾರಿ ತಿಂದು ನಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದೇವೆ. ವಿಶ್ವಕ್ಕೂ ವಿಷವನ್ನೇ ನೀಡುತ್ತಿದ್ದೇವೆ ಎಂಬ ಬಗ್ಗೆ ರೈತರು ಆತ್ಮಾವಲೋಕನಕ್ಕೆ ಇಳಿಯಬೇಕಿದೆ. ಕೃಷಿ ದಾರಿದ್ರ್ಯ ತೊಲಗಿಸಲು ಪೂರ್ವಜರ ಕೃಷಿ ಪರಂಪರೆಗೆ ನಾವು ಮರಳಬೇಕಿದೆ. ಮುಖ್ಯವಾಗಿ ದೇಸಿ ಹಸುಗಳ ಸಾಕಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ರೈತರು ಚಿಂತನೆ ನಡೆಸಬೇಕಾಗಿದೆ. ದೇಸಿ ಹಸುಗಳ ಹಾಲು, ಮೂತ್ರ, ಸಗಣಿ ಎಲ್ಲವೂ ಉಪಯುಕ್ತವಾಗಿದೆ. ಇವುಗಳ ಮೌಲ್ಯವರ್ಧನೆ ಮಾಡಿದರೆ ಆರೋಗ್ಯಕ್ಕೂ, ಆದಾಯಕ್ಕೂ ಉತ್ತಮ ಪ್ರಯೋಜನವಾಗಲಿದೆ. ದೇಶದ ಪ್ರಕೃತಿ ತಿದ್ದಬೇಕಾದರೆ, ಮೊದಲು ರೈತರಲ್ಲಿ ಪರಿವರ್ತನೆ ಆಗಬೇಕಿದೆ. ಉತ್ತಮ ಕೃಷಿಗೆ ಪೂರಕವಾಗಿ ಶ್ರೀಮಠ ಕಲ್ಚರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ರೈತರು ಇದನ್ನು ಅಭಿವೃದ್ಧಿಪಡಿಸುವ ಮೂಲಕ ಪರಸ್ಪರ ಹಂಚಿಕೆ ಮಾಡಬೇಕು ಎಂದರು.
ಸಿದ್ಧಾಶ್ರಮದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಷಮುಕ್ತ ಕೃಷಿ, ದೇಸಿ ಹಸುಗಳ ಸಾಕಣೆ ವಿಷಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ನಮ್ಮೆಲ್ಲ ರೈತರು ಅದನ್ನು ಮಾಡಲಿದ್ದಾರೆ ಎಂದು ಕನೇರಿ ಶ್ರೀಗಳಿಗೆ ಭರವಸೆ ನೀಡಿದರು. ಸಿಂದೋಗಿ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಜೋಡಳ್ಳಿ ಸ್ವಾಗತಿಸಿದರು. ಪತ್ರಕರ್ತ ಬಸವರಾಜ ಹೊಂಗಲ ನಿರೂಪಿಸಿದರು. ಕಲ್ಲನಗೌಡ ಪಾಟೀಲ ವಂದಿಸಿದರು. ನೂರಾರು ರೈತರು ಪಾಲ್ಗೊಂಡಿದ್ದರು.