Advertisement

ಉಪವಾಸ ಕೊನೆಗೊಳಿಸಿದ ಅಣ್ಣಾ, ಕೇಂದ್ರಕ್ಕೆ 6 ತಿಂಗಳ ಗಡುವು

07:35 PM Mar 29, 2018 | Team Udayavani |

ಹೊಸದಿಲ್ಲಿ : ಪ್ರಖ್ಯಾತ ಸಮಾಜ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಲೋಕಪಾಲ ನೇಮಕಾತಿ ಮತ್ತು ಇತರ ಕೆಲವು ಬೇಡಿಕೆಗಳನ್ನು ಒತ್ತಾಯಿಸಿ ಕಳೆದ ಆರು ದಿನಗಳಿಂದ ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಇಂದು ಗುರುವಾರ ಕೊನೆಗೊಳಿಸಿದ್ದಾರೆ. 

Advertisement

ಇನ್ನು ಆರು ತಿಂಗಳ ಒಳಗೆ ಲೋಕಪಾಲರನ್ನು ನೇಮಿಸುವಂತೆ ಅವರು ಕೇಂದ್ರ ಸರಕಾರಕ್ಕೆ ಗಡುವು ನಿಗದಿಸಿದ್ದಾರೆ. ಆರು ತಿಂಗಳ ಒಳಗೆ ಲೋಕಪಾಲರನ್ನು ನೇಮಿಸದಿದ್ದರೆ ಮತ್ತು ರೈತರಿಗೆ ಅವರ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡದಿದ್ದರೆ ತಾನು ಮತ್ತೆ ದೇಶಾದ್ಯಂತ ಚಳವಳಿ ನಡೆಸುವುದಾಗಿ ಅಣ್ಣಾ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರ ಭೇಟಿಯೊಂದಿಗೆ. ಅಣ್ಣಾ ತಮ್ಮ ನಿರಶನ ಸತ್ಯಾಗ್ರಹವನ್ನು ಕೊನೆಗೊಳಿಸಿದರು. 

ಅಣ್ಣಾ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ತಾಣಕ್ಕೆ ಕೇಂದ್ರ ಕೃಷಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಕೂಡ ಭೇಟಿ ನೀಡಿದರು. ಅಣ್ಣಾ ಅವರ ಆರೋಗ್ಯ ಹದಗೆಡುತ್ತಿರುವ ಮಾಹಿತಿಯನ್ನು ಪಡೆದುಕೊಂಡು ಸಿಂಗ್‌, ಫ‌ಡ್ನವೀಸ್‌ ಸ್ಥಳಕ್ಕೆ ಭೇಟಿ ನೀಡಿದ್ದರು. 

ನಿರಶನ ನಿರತ ಅಣ್ಣಾ ಅವರ ರಕ್ತದ ಒತ್ತಡ ಏರಿದ್ದು  ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹವಾಗಿ ಇಳಿದಿರುವ ಕಾರಣ ಅಣ್ಣಾಗೆ ತೀವ್ರ ಬಸವಳಿಕೆ ಉಂಟಾಗಿತ್ತು. ಮಾತ್ರವಲ್ಲದೆ ಅಣ್ಣಾ ಅವರ ದೇಹ ತೂಕ ಕೂಡ ಕಡಿಮೆಯಾಗಿತ್ತು. ಅಣ್ಣಾ ಉಪವಾಸ ಸತ್ಯಾಗ್ರಹ ಮುಂದುವರಿಸುವುದರಿಂದ ಅದರ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next