ಮುಂಬಯಿ: ರಾಜಕೀಯ ಕಾರ್ಯಕರ್ತ ಪವನ್ ರಾಜೆ ನಿಂಬಾಳ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾಯಕರ್ತ ಅಣ್ಣಾ ಹಜಾರೆ ಅವರು ಸಿಬಿಐನ ವಿಶೇಷ ಕೋರ್ಟ್‌ಗೆ ಸಾಕ್ಷಿದಾರನಾಗಿ ಮಂಗಳವಾರ ಹಾಜರಾಗಿದ್ದಾರೆ.
2006 ರ ಜೂನ್ 3 ರಂದು ನವಿ ಮುಂಬಯಿಯಲ್ಲಿ ನಿಂಬಾಳ್ಕರ್ ಮತ್ತು ಕಾರಿನ ಚಾಲಕನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.
ಎನ್‌ಸಿಪಿ ಮಾಜಿ ಸಂಸದ ಪದಮ್ ಸಿನ್ಹ ಪಾಟೀಲ್ ಅವರು 30 ಲಕ್ಷ ರೂಪಾಯಿ ಸುಪಾರಿ ನೀಡಿ ಹತ್ಯೆಗೈದಿದ್ದರು ಎನ್ನುವ ಆರೋಪವಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪದಮ್ ಸಿನ್ಹ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಕೋರ್ಟ್‌ಗೆ ಪದಮ್ ಸಿನ್ಹ ಅವರೂ ಹಾಜರಾಗಿದ್ದು ,ಪ್ರಮುಖ ಸಾಕ್ಷಿದಾರರಾಗಿರುವ ಅಣ್ಣಾ ಹಜಾರೆ ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ.
ಅಣ್ಣಾ ಹಜಾರೆ ಅವರು ಪದಮ್‌ಸಿನ್‌ಹ ಅವರ ಮೇಲೆ ಹತ್ಯೆ ಆರೋಪವನ್ನು ಮಾಡಿದ್ದರು. ಈ ಬಗ್ಗೆ ಯೂ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.