Advertisement

Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕಿ ಹ*ತ್ಯೆ!

08:19 PM Jan 06, 2025 | Team Udayavani |

ಮುಂಬಯಿ: ತಲೆಮರೆಸಿಕೊಂಡಿರುವ ದರೋಡೆಕೋರ ಅನ್ಮೋಲ್ ಬಿಷ್ಣೋಯ್ ತನ್ನ ಸಂಘಟಿತ ಅಪರಾಧ ಜಾಲದ ಮೂಲಕ “ಉಗ್ರ ವಾತಾವರಣವನ್ನು ಸೃಷ್ಟಿಸಲು” ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಹ*ತ್ಯೆ ಮಾಡಲು ಆದೇಶಿಸಿದ್ದ ಎಂದು ಮುಂಬೈ ಪೊಲೀಸರು ಸೋಮವಾರ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

Advertisement

ಕ್ರೈಂ ಬ್ರಾಂಚ್ 4,590 ಪುಟಗಳ ಚಾರ್ಜ್ ಶೀಟ್‌ ಸಲ್ಲಿಸಿದ್ದು 29 ಆರೋಪಿಗಳನ್ನು ಹೆಸರಿಸಿದೆ, ಇದರಲ್ಲಿ 26 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನ ಸಹೋದರ ಅನ್ಮೋಲ್ ಬಿಷ್ಣೋಯ್ ಸೇರಿದಂತೆ ಮೂವರು ವಾಂಟೆಡ್ ಗಳು ಪ್ರಕರಣದಲ್ಲಿ ಸೇರಿದ್ದಾರೆ. ಇನ್ನೂ ಇಬ್ಬರು ಶಂಕಿತ ಸಹ-ಸಂಚುಕೋರರು, ಮೊಹಮ್ಮದ್ ಯಾಸಿನ್ ಅಖ್ತರ್ ಮತ್ತು ಶುಭಂ ಲೋಂಕರ್.ಎಲ್ಲಾ 29 ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದಿಕಿ (66) ಅವರನ್ನು 2024 ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ದಲ್ಲಿ ಅವರ ಮಗ ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹ*ತ್ಯೆಗೈದಿದ್ದರು.
ಬಂಧಿತ 26 ಆರೋಪಿಗಳಲ್ಲಿ ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಮತ್ತು ಆತನ ಸಹಾಯಕರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next