ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಡೊಂಬಿವಲಿ ಶಾಖೆಯ ಅಂಕುರ್ ಶಿಕ್ಷಣ ಸಂಸ್ಥೆಯ ಒಂಬತ್ತನೇ ವಾರ್ಷಿಕೋತ್ಸವ ಸಂಭ್ರಮವು ಮಾ. 10ರಂದು ಸಂಜೆ ಡೊಂಬಿವಲಿ ಪೂರ್ವದ ಜ್ಞಾನೇಶ್ವರ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಪ್ರಾರಂಭದಲ್ಲಿ ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಶೇಖರ್ ಮೆಂಡನ್ ಅವರು ಮಹಾಲಕ್ಷ್ಮೀ ಮತ್ತು ಬೆಣ್ಣೆಕುದ್ರು ಕುಲಮಾಸ್ತಿ ಅಮ್ಮನವರ ಪ್ರಾರ್ಥನೆಗೈದರು. ವಾರ್ಷಿ ಕೋತ್ಸವದ ಅಂಗವಾಗಿ ಅಂಕುರ್ ವಿಭಾಗದ ಮುಖ್ಯ ಶಿಕ್ಷಕಿ ಪೂನಂ ಮೂಲೆ ಅವರು ಸ್ವಾಗತಿಸಿದರು. ಪೂನಂ ಮೂಲೆ, ದಿಲೇಶ್ ಪೆಡೆ°àಕರ್, ಮೀನಾ ಅಡಪ, ತೇಜಶ್ರೀ ಪವಾರ್ ಪ್ರಾರ್ಥನೆಗೈದರು. ಶಾಖೆಯ ಆಡಳಿತ ಸಮಿತಿಯ ಕಾರ್ಯಕರ್ತರು, ಅಂಕುರ್ ವಿಭಾಗದ ಕಾರ್ಯಕರ್ತರು ಹಾಗೂ ಮಹಿಳಾ ವಿಭಾಗದ ಕಾರ್ಯಕರ್ತರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಂಕುರ್ ವಿಭಾಗದ ಪುಟಾಣಿಗಳಿಂದ ಹಾಗೂ ಪೋಷಕರಿಂದ ಸುಮಾರು 20ಕ್ಕಿಂತಲೂ ಅಧಿಕ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡವು. ಸಭಾ ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಕಾರ್ಯಕರ್ತರು, ಅಂಕುರ್ ವಿಭಾಗದವರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳನ್ನು ಬಹುಮಾನ ವಿತರಿಸಿ ಶುಭ ಹಾರೈಸಿದರು.
ವಾರ್ಷಿಕೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸಿದ ಅಂಕುರ್ ಸಂಸ್ಥೆಯ ಶಿಕ್ಷಕವೃಂದ, ಶಿಕ್ಷಕೇತರ ಸಿಬಂದಿಗಳನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ಯದುವೀರ್ ಪುತ್ರನ್ ಮತ್ತು ಅಂಕುರ್ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಭಾಸ್ರ ಎನ್. ಕಾಂಚನ್ ಇವರು ಗೌರವಿಸಿದರು. ಮುಖ್ಯ ಶಿಕ್ಷಕಿ ಪೂನಂ ಮೂಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಖೆಯ ಆಡಳಿತ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆ
ಯರು, ಅಂಕುರ್ ವಿಭಾಗದ ಕಾರ್ಯಕರ್ತರು, ಸದಸ್ಯರು, ಶಿಕ್ಷಕಿಯರು, ಶಿಕ್ಷಕೇತರ ಸಿಬಂದಿಗಳು, ಮಕ್ಕಳು, ಪಾಲಕ-ಪೋಷಕರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.