Advertisement
ಮಂಗಳೂರು ಎಚ್‌ಪಿಸಿಎಲ್ ಕಂಪೆನಿಯ ಗುತ್ತಿಗೆಯ ಎಸ್ ಪಿ ಎಂಜಿನಿಯರಿಂಗ್ ವರ್ಕ್ಸ್ ನ ಕಾರ್ಮಿ ಕರು ಎನ್‌ಡಿಆರ್‌ಎಫ್, ನೌಕಾ ದಳ ಹಾಗೂ ಅಗ್ನಿಶಾಮಕ ಸಿಬಂದಿ ಜತೆ ಸೇರಿ ಅನಿಲವನ್ನು ಖಾಲಿ ಮಾಡಿದ್ದಾರೆ. ಬಾಳ ಗ್ರಾಮದ ಸಂಕೇತ ಪೂಜಾರಿ, ಕುಳಾಯಿಗುಡ್ಡೆ ನಿವಾಸಿ ಮನೋಜ್, ಜನತಾ ಕಾಲನಿಯ ರತನ್, ಕಾವೂರಿನ ಸಂತೋಷ್ ಅವರು ನೇರ ಕಾರ್ಯಾಚರಣೆ ಕೈಗೊಂಡವರು. ಎಚ್‌ಪಿಸಿಎಲ್ ಸಂಸ್ಥೆಯ ಸುರûಾ ಅಧಿಕಾರಿ ಶಿವರಾಜ್ ಚೌಹಾಣ್ ಮಾರ್ಗದರ್ಶನ ನೀಡಿದರು.
Related Articles
ನೀರಲ್ಲಿ ಟ್ಯಾಂಕರ್ ಕೊಚ್ಚಿಕೊಂಡು ಹೋಗುವ ಸಂದರ್ಭ ಅದರ ಹಿಂಭಾಗದಲ್ಲಿರುವ ಮೀಟರ್‌ಗೆàಜ್‌ಗೆ ಹಾನಿಯಾಗಿ ಸೋರಿಕೆ ಆರಂಭವಾಗಿತ್ತು. ಸೋರಿಕೆ ತಡೆಯುವುದು ಮೊದಲ ಸವಾಲಾಗಿತ್ತು. ಕಿಡಿ ಹೊತ್ತಿ ಅಪಾಯವಾಗದಂತೆ ಯಾವುದೇ ಕಬ್ಬಿಣದ ಆಯುಧ ಬಳಸದೆ ಕೇವಲ ಮರದ ರೀಪು ಸಹಿತ ಸುರಕ್ಷಾ ಕ್ರಮ ತೆಗೆದುಕೊಂಡು ಸೋರಿಕೆ ತಡೆಗಟ್ಟಲಾಯಿತು. ಬಳಿಕ ಅಗ್ನಿಶಾಮಕ, ಎನ್‌ಡಿಆರ್‌ಎಫ್ ತಂಡದೊಂದಿಗೆ ತೆರಳಿ ಇಂಧನ ಖಾಲಿ ಮಾಡಲು ಯತ್ನ ನಡೆಯಿತಾದರೂ ಟ್ಯಾಂಕರ್ ನೀರಿನ ರಭಸಕ್ಕೆ ಓಲಾಡುತ್ತಿದ್ದರಿಂದ ಸಾಧ್ಯವಾಗಲಿಲ್ಲ. ಬಳಿಕ ದಡದವರೆಗೆ ಎಳೆಯಲು ಸಿದ್ಧತೆ ನಡೆಸಿ, ನೀರಿನಲ್ಲಿಯೇ ಇಂಧನ ಖಾಲಿ ಮಾಡಲಾಯಿತು. ಶುಕ್ರವಾರ ಸಂಜೆ 6ರವರೆಗೆ ಕಾರ್ಯಾಚರಣೆ ನಡೆದಿತ್ತು.
Advertisement
ಟ್ಯಾಂಕರ್‌ನ ಗೇಜ್‌ಗೆ ಹಾನಿಯಾಗಿತ್ತು. ಟ್ಯಾಂಕ ರ್‌ನ ಕ್ಯಾಬಿನ್ ಇರಲಿಲ್ಲ. ಅದರಲ್ಲಿದ್ದ 18 ಟನ್ ಇಂಧ ನವನ್ನು ನೀರಿನಲ್ಲೇ ಖಾಲಿ ಮಾಡಿದೆವು. ಅಗ್ನಿಶಾಮಕದ ನೆರವಿನಿಂದ ಪ್ರಶರ್ ಮೂಲಕ ಇಂಧನವನ್ನು ಪೂರ್ತಿ ಖಾಲಿ ಮಾಡಿದೆವು. ನೀರಿನಲ್ಲಿಯೇ ಇದ್ದುದರಿಂದ ಯಾವುದೇ ಕಿಡಿ ಹೊತ್ತಿ ಸ್ಫೋಟವಾಗುವ ಅವಕಾಶ ಕಡಿಮೆ. ಆದರೂ ಸಾಕಷ್ಟು ಮುಂಜಾಗ್ರತೆ ವಹಿಸಿದ್ದೆವು ಎನ್ನುತ್ತಾರೆ ತಂಡದ ರತನ್.