ಅಂಕೋಲಾ : ಹೊಲ್ ಸೇಲ್ ಕಿರಾಣಿ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ಅಂಗಡಿಯಲ್ಲಿದ್ದ ಕೋಟ್ಯಾಂತರ ಮೌಲ್ಯದ ಸಾಮಾನುಗಳು ಸುಟ್ಟುಕರಕಲಾಗಿರುವ ಘಟನೆ ತಾಲೂಕಿನ ವಂದಿಗೆ ರಾಹೆ66 ಅಂಚಿನಲ್ಲಿ ನಡೆದಿದೆ.
ಚಂದ್ರಿಕಾ ಪ್ರಾವಿಷನ್ ಸ್ಟೋರ್ಸ್ ಎನ್ನುವ ಅಂಗಡಿ ಸುಟ್ಟು ಕರಕಲಾಗಿದೆ. ಹೋಲ್ ಸೇಲ್ ಮತ್ತು ರಿಟೇಲ್ ಅಂಗಡಿ ಇದಾಗಿದ್ದು ಅಂಗಡಿಯಲ್ಲಿ ಕೊಟ್ಯಾಂತರ ಮೌಲ್ಯದ ಕಿರಾಣಿ ಸೇರಿದಂತೆ ಇನ್ನಿತರ ಸಾಮಾನುಗಳು ದಾಸ್ತಾನು ಇಟ್ಟಿದ್ದರು.
ಅಂಗಡಿಯ ಗೋಡನ್ ನಲ್ಲಿ ದಾಸ್ತಾನು ಇಡಲಾದ ವಸ್ತುಗಳೆಲ್ಲಾ ಬಹುತೇಕ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ ಎನ್ನಲಾಗಿದ್ದು, ಕೋಟಿ ರೂ ಮೌಲ್ಯದ ವರೆಗೆ ಹಾನಿ ಸಂಭವಿಸಿರುವ ಸಾಧ್ಯತೆ ಕೇಳಿ ಬಂದಿದೆ, ಅಂಗಡಿಯಲ್ಲಿದ್ದ ಸಿಸಿಟಿವಿ, ಕಂಪ್ಯೂಟರ್ ಕೂಡ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಅಂಗಡಿಯ ಪಕ್ಕದಲ್ಲಿಯೆ ಕಟ್ಟಿಗೆ ಮಿಲ್ ಇದ್ದು ಭಾರಿ ಅನಾಹುತವು ತಪ್ಪಿದಂತಾಗಿದೆ. ಈ ಕಿರಾಣಿ ಅಂಗಡಿ ಪಕ್ಕದಲ್ಲಿಯೇ ಇದ್ದ ವಾಚಮನ್ ಅಂಗಡಿಯಲ್ಲಿ ಆಗುತ್ತಿದ್ದ ಸದ್ದನ್ನು ಕೇಳಿ ಓರ್ವ ಕಳ್ಳರಿರಬಹುದೇ ಎಂದು ನೋಡಲು ಹೋದಾಗ ಬೆಂಕಿ ಅವಘಡ ವಾಗಿರುವುದು ಗಮನಕ್ಕೆ ಬಂದು, ಬಳಿಕ ತಕ್ಷಣ ಈ ವಿಷಯನ್ನು ನಂತರ ಅಗ್ನಿ ಶಾಮಕ ಠಾಣೆಗೂ ತಿಳಿಸಲಾಗಿ, ಎರಡು ವಾಹನಗಳಲ್ಲಿ ಆಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ತಡ ರಾತ್ರಿಯಿಂದ ಬೆಳಗಿನ ವರೆಗೆ ನಿರಂತರ ಕಾರ್ಯಾಚರಣೆ ನಡೆಸಿ ತಮ್ಮ ವಾಹನಕ್ಕೆ 6 ಕ್ಕೂ ಹೆಚ್ಚು ಬಾರಿ ನೀರು ತುಂಬಿಕೊಂಡು, ಅಗ್ನಿ ಶಮನಕ್ಕೆ ಕರ್ತವ್ಯ ನಿರ್ವಹಿಸಿದರು. ಇದೇ ವೇಳೆ ಹೆಸ್ಕಾಂ ಸಿಬ್ಬಂದಿಗಳು ಆಗಮಿಸಿ ಕೆಲ ಮುಂಜಾಗೃತಾ ಕ್ರಮ ಕೈಗೊಂಡರು. ಅಕ್ಕ ಪಕ್ಕಗಳಲ್ಲೇ ಕಟ್ಟಿಗೆ ಮಿಲ್ ಗಳಿರುವುದು ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿತ್ತಾದರೂ, ಅದೃಷ್ಟವಶಾತ್ ಬೆಂಕಿ ಪಸರಿಸದೇ ಸಂಭವನೀಯ ಇನ್ನಷ್ಟು ಹಾನಿ ತಪ್ಪಿದಂತಾಗಿದೆ.
ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ತಾಯಿ ಜೊತೆ ನಿಂತಿದ್ದ 3 ವರ್ಷದ ಮಗುವನ್ನು ರೈಲ್ವೆ ಟ್ರ್ಯಾಕ್ ಗೆ ದೂಡಿದ ಮಹಿಳೆ