Advertisement

ಅಂಕೋಲಾ :ಹುಲ್ಲು ಸಾಗಿಸುತ್ತಿದ್ದ ಬೊಲೆರೋ ವಾಹನ ಬೆಂಕಿಗೆ ಆಹುತಿ

01:50 PM Apr 14, 2022 | Team Udayavani |

ಅಂಕೋಲಾ : ಚಲಿಸುತ್ತಿದ್ದ ಬೊಲೆರೋ ವಾಹನಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ವಾಹನ ಮತ್ತು ವಾಹನದಲ್ಲಿದ್ದ ಹುಲ್ಲು ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಬೆಳಸೆ ಗ್ರಾ.ಪಂ ವ್ಯಾಪ್ತಿಯ ತಳಗದ್ದೆಯಲ್ಲಿ ನಡೆದಿದೆ.

Advertisement

ತಾಲೂಕಿನ ಆಂದ್ಲೆ ಗ್ರಾಮದಿಂದ ಹುಲ್ಲನ್ನು ತುಂಬಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ತಳಗದ್ದೆ ಬಳಿ ರಸ್ತೆಯಲ್ಲಿ ತೂಗು ಬಿದ್ದಿರುವ ವಿದ್ಯುತ್ ತಂತಿ ತಗುಲಿ ವಾಹನದಲ್ಲಿದ್ದ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಅಲ್ಲದೆ ವಾಹನವು ಬೆಂಕಿಗೆ ಆಹುತಿಯಾಗಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ತಂಡ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next