Advertisement
ರೇಡಿಯೋ ಕಾರ್ಯಕ್ರಮದ ಮನ್ ಕಿ ಬಾತ್‌ನಲ್ಲಿ ಭಾನುವಾರ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ ಅವರು, ಪರೀಕ್ಷೆ ವೇಳೆ ಮನೆಯಲ್ಲಿ ಪೋಷಕರು ಹಬ್ಬದ ವಾತಾವರಣ ಸೃಷ್ಟಿಸಬೇಕು ಎಂದಿದ್ದಾರೆ. ಜೀವನದ ಯಶಸ್ಸಿಗೆ ಪರೀಕ್ಷೆಗಳು ಮಾನದಂಡವಲ್ಲ. ಧ್ಯೇಯ ಹಾಗೂ ಆಕಾಂಕ್ಷೆಗಳು ಒಂದೇ ಆಗಿದ್ದರೆ ಅಂಕಗಳೇ ನಿಮ್ಮನ್ನು ಹಿಂಬಾಲಿಸುತ್ತವೆ. ನೀವು ಅಂಕಗಳ ಹಿಂದೆ ಹೋಗಬೇಕಾಗಿಲ್ಲ ಎಂದು ತಿಳಿಸಿದರು.
ಮನ್ ಕಿ ಬಾತ್‌ನಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಯಶಸ್ಸಿನ ಗುಟ್ಟುಗಳನ್ನು ತಿಳಿಸಿದ್ದಕ್ಕೆ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರು ಟ್ವೀಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Related Articles
ಮೋದಿ ಜ.30ರ ಹುತಾತ್ಮರ ದಿನಾಚರಣೆ ಅಂಗವಾಗಿ 2 ನಿಮಿಷ ಮೌನಾಚರಣೆ ಮಾಡಲು ಕರೆ ನೀಡಿದ್ದಾರೆ. “ಜ.30ರ ಸೋಮವಾರ ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ದಿನಾಚರಣೆ. ಆ ಹುತಾತ್ಮರಿಗೆ ಗೌರವ ಸಲ್ಲಿಸಲು ಸೋಮವಾರ ಬೆಳಗ್ಗೆ 2 ನಿಮಿಷ ಮೌನಾಚರಣೆ ಮಾಡೋಣ’ ಎಂದು ಹೇಳಿದ್ದಾರೆ.
Advertisement