ಗಂಗಾವತಿ: ಇತಿಹಾಸ ಪ್ರಸಿದ್ಧ ಅಂಜನಾದ್ರಿ ಕ್ಷೇತ್ರ ಪ್ರಸ್ತುತ ವಿಶ್ವದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಬ್ರಿಟಿಷ್ ರಾಯಭಾರಿ ಅಲೆಗ್ಸಾಂಡರ್(ಅಲೆಕ್ಸ್) ಎಲಿಸ್ ದಂಪತಿ ಹೇಳಿದರು.
ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಆಂಜನೇಯನ ದರ್ಶನ ಪಡೆದ ಬಳಿಕ ಮಾತಾನಾಡಿದರು.
ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ, ಪ್ರವಾಸಿಗರಿಗೆ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಈ ಕ್ಷೇತ್ರದಲ್ಲಿ ನಿತ್ಯವೂ ಸಾವಿರಾರು ಜನ ಆಗಮಿಸುವುದರಿಂದ ಈ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸೇರಿದಂತೆ ಅಗತ್ಯ ಪ್ರವಾಸಿ ಮಾಧ್ಯಮಗಳನ್ನು ವ್ಯವಸ್ಥೆಮಾಡಬೇಕು. ಇಲ್ಲಿಗೆ ಸಂಪರ್ಕ ಕಲ್ಪಿಸುವ ರೈಲ್ವೆ, ವಿಮಾನಯಾನ, ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಕೇಂದ್ರದ ಡೀಸೆಲ್ ಸಬ್ಸಿಡಿ ರದ್ದು : ಖಾಸಗಿ ಬಂಕ್‌ನತ್ತ ಕೆಎಸ್ಸಾರ್ಟಿಸಿ ಮುಖ!
ಈ ಸಂದರ್ಭದಲ್ಲಿ ಶ್ರೀ ಅಂಜನಾದ್ರಿ ದೇವಸ್ಥಾನ ಕಮಿಟಿ ವತಿಯಿಂದ ಬ್ರಿಟಿಷ್ ರಾಯಭಾರಿ ಅಲೆಗ್ಸಾಂಡರ್(ಅಲೆಕ್ಸ್) ಎಲಿಸ್ ದಂಪತಿಯನ್ನು ಸನ್ಮಾನಿಸಲಾಯಿತು. ಈ ವೇಳೆ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿದ್ದರು.