Advertisement

ಕಿಷ್ಕಿಂಧಾ ಅಂಜನಾದ್ರಿ, ಮೋರ್ಯರ ಬೆಟ್ಟ ಸ್ಥಳಕ್ಕೆ ತೆರಳಲು ಮಾರ್ಗಸೂಚಿ ಫಲಕ ಅಳವಡಿಸಲು ಆಗ್ರಹ

03:20 PM Jul 26, 2023 | Team Udayavani |

ಗಂಗಾವತಿ: ತಾಲೂಕಿನ ಐತಿಹಾಸಿಕ ಸ್ಥಳಗಳಾದ ಕಿಷ್ಕಿಂಧಾ ಅಂಜನಾದ್ರಿ ಪಂಪ ಸರೋವರ ಮೋರ್ಯರ ಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಹೋಗಲು ಮಾರ್ಗಸೂಚಿಫಲಕಗಳನ್ನು ಕನ್ನಡ, ಇಂಗ್ಲಿಷ್ ,ಹಿಂದಿಯಲ್ಲಿ ಅಳವಡಿಸುವಂತೆ ಚಾರಣ ಬಳಗದ ಸಂಚಾಲಕರಾದ ಡಾ.ಶಿವಕುಮಾರ್ ಮಾಲೀಪಾಟೀಲ್ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.

Advertisement

ರಾಯಚೂರು ಕಡೆಯಿಂದ ಬರುವವರು ಕೊಪ್ಪಳ ,ಗದಗ, ಹುಬ್ಬಳ್ಳಿ ಹೋಗುವ ಮಾರ್ಗ- ಆನೆಗೊಂದಿ , ಅಂಜನಾದ್ರಿ ,ಹೊಸಪೇಟೆಗೆ ಹೋಗುವ ಮಾರ್ಗ-ರಾಣಾ ಪ್ರತಾಪ್‌ ಸಿಂಗ್‌ ವೃತ್ತದಲ್ಲಿ ಬರೆಸಬೇಕು.

ಕಂಪ್ಲಿ ಹೋಗುವ ಮಾರ್ಗ -ಸಿಂದನೂರ್ ,ರಾಯಚೂರು ಮಾರ್ಗ -ಜುಲಾಯಿ ನಗರ ವೃತ್ತದಲ್ಲಿ ಬರೆಸಬೇಕು.

ಕೊಪ್ಪಳ ಕಡೆಯಿಂದ ಬರುವವರು ಕನಕಗಿರಿ , ರಾಯಚೂರು ,ಗಂಗಾವತಿ ಬಸ್ ನಿಲ್ದಾಣ ಹೋಗುವ ಮಾರ್ಗ ,
ಸಿ ಬಿ ಎಸ್ ವೃತ್ತದಲ್ಲಿ ಬರೆಸಬೇಕು.

ಆನೆಗೊಂದಿ ಕಡೆಯಿಂದ ಬರುವ ಪ್ರವಾಸಿಗರು , ಕಂಪ್ಲಿ ,ಕಾರಟಗಿ,ಸಿಂಧನೂರು,ಬೈಪಾಸ್ ರಸ್ತೆ ಮಾರ್ಗ,
ಗಾಂಧಿ ವೃತ್ತಕ್ಕೆ , ಕೋರ್ಟ್‌ ಗೆ ಹೋಗುವ ಮಾರ್ಗ ಬಸ್ ನಿಲ್ದಾಣ ,ನೀಲಕಂಠೇಶ್ವರ ವೃತ್ತದಲ್ಲಿ ಬರೆಸಬೇಕು.

Advertisement

ಗಂಗಾವತಿಗೆ ಬರುವ ಪ್ರವಾಸಿಗರು ,ವಾಹನ ಸವಾರರು ,ವಾಹನ ನಿಲ್ಲಿಸಿ ಕೇಳುತ್ತಾ ಸಾಗಬೇಕು. ಮಧ್ಯರಾತ್ರಿ ಬರುವ,ಹೋಗುವ ಪ್ರವಾಸಿಗರಿಗೆ ತುಂಬಾ ತೊಂದರೆ ಆಗುತ್ತದೆ.ಆದಷ್ಟು ಬೇಗ ಸರಕಾರ ,ನಗರಸಭೆ ಕ್ರಮ ತೆಗೆದುಕೊಳ್ಳಬೇಕು. ಕನ್ನಡ ,ಇಂಗ್ಲಿಷ್ ಭಾಷೆಯಲ್ಲಿ ಬರೆಸುವಂತೆ ದಂತ ವೈದ್ಯ ಡಾ.ಶಿವಕುಮಾರ್ ಮಾಲೀಪಾಟೀಲ್  ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next