Advertisement

ವಿದ್ಯಾರ್ಥಿನಿ ಕೊಲೆ ಆರೋಪಿ ಬಂಧನ

09:21 AM Jun 09, 2019 | keerthan |

ಮಂಗಳೂರು: ಅತ್ತಾವರದ ಬಾಡಿಗೆ ಮನೆಯಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೆನಕೊಟಗಿ ತಾಂಡಾ ನಿವಾಸಿ ಸಂದೀಪ್‌ ರಾಥೋಡ್‌ (23) ಬಂಧಿತನಾಗಿದ್ದು, ಈತ ನನ್ನು ಪಾಂಡೇಶ್ವರ ಪೊಲೀಸರು ಮತ್ತು ವಿಜಯಪುರದ ಸಿಂಧಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ಬೆಳಗ್ಗೆ ಸಿಂಧಗಿಯಲ್ಲಿ ಬಂಧಿಸಿದರು. ಆತನನ್ನು ಮಂಗಳೂರಿಗೆ ಕರೆತರಲಾಗುತ್ತಿದೆ.

ಅಂಜನಾಳ ಮೊಬೈಲ್‌ನಲ್ಲಿ ಆತನ ಮೊಬೈಲ್‌ ನಂಬರ್‌ ಇದ್ದ ಕಾರಣ ಆರೋಪಿಯನ್ನು ಎರಡೇ ದಿನಗಳೊಳಗೆ ಬಂಧಿಸಲು ಸಾಧ್ಯವಾಯಿತು.

ಮದುವೆಗೆ ನಿರಾಕರಿಸಿದ್ದು ಕಾರಣ
ಸಂದೀಪ್‌ ಮತ್ತು ಅಂಜನಾ ಪರಿಚಿತರಾಗಿದ್ದು, ಸಂಬಂಧವನ್ನೂ ಇಟ್ಟುಕೊಂಡಿದ್ದರು. ಆದರೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು. ಈ ವಿಚಾರದಲ್ಲಿ ಶುಕ್ರವಾರ ಬೆಳಗ್ಗೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಅಂಜನಾ ಉಜಿರೆಯಲ್ಲಿ ಎಂ.ಎಸ್ಸಿ. ಮುಗಿ ಸಿದ್ದು, ಈಕೆಗೆ ಫೇಸ್‌ಬುಕ್‌ ಮೂಲಕ ಸಂದೀಪ್‌ನ ಪರಿಚಯ ಆಗಿತ್ತು ಎನ್ನಲಾಗಿದೆ. ಆಕೆ ಬ್ಯಾಂಕಿಂಗ್‌ ಪರೀಕ್ಷೆಗೆ ಹಾಗೂ ಆತ ಪೊಲೀಸ್‌ ಹುದ್ದೆ ಪರೀಕ್ಷೆಯ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದು, ಅತ್ತಾವರ ಕೆಎಂಸಿ ಆಸ್ಪತ್ರೆ ಹಿಂಭಾಗದ ಮನೆಯೊಂದರ ಕೊಠಡಿಯನ್ನು ದಂಪತಿ ಎಂದು ಹೇಳಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದರು.

Advertisement

ಆರೋಪಿಯಿಂದ ಒಂದು ಕರಿಮಣಿ ಸರ ಸಿಕ್ಕಿದೆ. ತಾನು ಆಕೆಯನ್ನು ವಿವಾಹವಾಗಿರುವುದಾಗಿ ಆತ ತಿಳಿಸಿದ್ದು, ಹೆಚ್ಚಿನ ವಿಚಾರಣೆಯಿಂದಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿ. ಜಿ. ಅಲ್ಲ; ಬಾಡಿಗೆ ಕೊಠಡಿ
ಸಂದೀಪ್‌ ಮತ್ತು ಅಂಜನಾ ವಾಸ್ತವ್ಯವಿದ್ದ ಕೊಠಡಿ ಪಿ.ಜಿ. (ಪೇಯಿಂಗ್‌ ಗೆಸ್ಟ್‌) ಅಲ್ಲ; ಅದು ಬಾಡಿಗೆ ಕೊಠಡಿಯಾಗಿದೆ. ಈ ಮನೆಯಲ್ಲಿ 6 ಬಾಡಿಗೆ ಕೊಠಡಿಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next